ನವದೆಹಲಿ: ಡ್ರೋನ್‌ಗಳ ಸಹಾಯದಿಂದ ರಾಷ್ಟ್ರದಾದ್ಯಂತ ಅಭಿವೃದ್ಧಿ ಕೆಲಸಗಳನ್ನು ರಹಸ್ಯವಾಗಿ ಪರಿಶೀಲಿಸಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ದೇಶದ ಅತಿದೊಡ್ಡ ಡ್ರೋನ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅದ್ಭುತ ಉತ್ಸಾಹ ಕಂಡುಬರುತ್ತಿದೆ. ಇದು ಉದ್ಯೋಗ ಸೃಷ್ಟಿಯ ಉದಯೋನ್ಮುಖ ಸಾಧ್ಯತೆಗಳನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಎರಡು ದಿನಗಳ ‘ಭಾರತ್ ಡ್ರೋನ್ ಮಹೋತ್ಸವ್’ ಕಾರ್ಯಕ್ರಮವು ದೆಹಲಿಯಲ್ಲಿ ಶುಕ್ರವಾರ ಆರಂಭಗೊಂಡಿದೆ.
ಡ್ರೋನ್ ಮೂಲಕ ರಹಸ್ಯ ಪರಿಶೀಲನೆ ನಡೆಸಿದ ಬಗೆಗಿನ ಮೋದಿ ಭಾಷಣದ ವಿಡಿಯೊ ತುಣುಕಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸದಸ್ಯೆ ಲಾವಣ್ಯ ಬಲ್ಲಾಳ್, 'ಸರ್, ಬೆಂಗಳೂರು ಮತ್ತು ಶಿರಡಿ ಘಾಟ್‌ನಲ್ಲಿ ರಸ್ತೆಗುಂಡಿಗಳನ್ನು ವೀಕ್ಷಿಸಿದ್ರಾ? ಅವುಗಳು ಚಂದ್ರನಲ್ಲಿರುವ ಕುಳಿಗಳಿಗಿಂತ ದೊಡ್ಡದಿವೆ' ಎಂದು ಕಾಲೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.