ADVERTISEMENT

ಅಗ್ನಿತೀರ್ಥ ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ

ಪಿಟಿಐ
Published 20 ಜನವರಿ 2024, 13:15 IST
Last Updated 20 ಜನವರಿ 2024, 13:15 IST
<div class="paragraphs"><p>ರಾಮೇಶ್ವರಂನಲ್ಲಿರುವ ಅಗ್ನಿ ತೀರ್ಥದಿಂದ ರಾಮನಾಥಸ್ವಾಮಿ ದೇವಸ್ಥಾನಕ್ಕೆ&nbsp; ಪ್ರಯಾಣಿಸುತ್ತಿರುವ ಪ್ರಧಾನಿ ಮೋದಿ.</p></div>

ರಾಮೇಶ್ವರಂನಲ್ಲಿರುವ ಅಗ್ನಿ ತೀರ್ಥದಿಂದ ರಾಮನಾಥಸ್ವಾಮಿ ದೇವಸ್ಥಾನಕ್ಕೆ  ಪ್ರಯಾಣಿಸುತ್ತಿರುವ ಪ್ರಧಾನಿ ಮೋದಿ.

   

(ಚಿತ್ರ ಕೃಪೆ– ಪಿಟಿಐ) 

ರಾಮೇಶ್ವರಂ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ 'ಅಗ್ನಿ ತೀರ್ಥ' ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ADVERTISEMENT

ರುದ್ರಾಕ್ಷಿ ಮಾಲೆ ಧರಿಸಿದ್ದ ಮೋದಿ, ತಮಿಳುನಾಡಿನ ಪುರಾತನ ಶಿವ ದೇವಾಲಯ ರಾಮನಾಥಸ್ವಾಮಿ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಅವರಿಗೆ ಪುರೋಹಿತರು ಸಾಂಪ್ರದಾಯಿಕವಾಗಿ ಸನ್ಮಾನಿಸಿದರು. ಬಳಿಕ ಪ್ರಧಾನಿ ದೇಗುಲದಲ್ಲಿ ನಡೆಯುವ ‘ಭಜನೆ’ಯಲ್ಲಿಯೂ ಭಾಗವಹಿಸಿದ್ದರು.

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ರಾಮೇಶ್ವರಂ ದ್ವೀಪದಲ್ಲಿರುವ ಶಿವ ದೇವಾಲಯವು ರಾಮಾಯಣದೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿರುವ ಶಿವಲಿಂಗವನ್ನು ಶ್ರೀರಾಮನು ಸ್ಥಾಪಿಸಿದ್ದಾನೆ. ರಾಮ ಹಾಗೂ ಸೀತಾದೇವಿ ಇಲ್ಲಿ ಪ್ರಾರ್ಥಿಸಿದ್ದರು ಎಂಬ ನಂಬಿಕೆಯಿದೆ.

ತಿರುಚಿರಾಪಳ್ಳಿ ಜಿಲ್ಲೆಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ, ವಾಯುಪಡೆಯ ಹೆಲಿಕಾಪ್ಟರ್ ಮೂಲಕ ರಾಮನಾಥಪುರಂಗೆ ಆಗಮಿಸಿದ ಮೋದಿ ಅವರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.