ADVERTISEMENT

ಡ್ರೋನ್ ಉತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ

ಪಿಟಿಐ
Published 27 ಮೇ 2022, 21:18 IST
Last Updated 27 ಮೇ 2022, 21:18 IST
ಸಾಂದರ್ಭಿಕ ಚಿತ್ರ –ಪಿಟಿಐ
ಸಾಂದರ್ಭಿಕ ಚಿತ್ರ –ಪಿಟಿಐ   

ನವದೆಹಲಿ: ‘2014ಕ್ಕೂ ಮೊದಲು ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಉದಾಸೀನದ ವಾತಾವರಣವಿತ್ತು. ಅದರಿಂದಾಗಿ ಬಡವರು ಮತ್ತು ಮಧ್ಯಮ ವರ್ಗದವರು ಹೆಚ್ಚು ತೊಂದರೆ ಅನುಭವಿಸಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ನವದೆಹಲಿಯಲ್ಲಿ ದೇಶದ ಅತಿದೊಡ್ಡ ಡ್ರೋನ್ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡ್ರೋನ್ ತಂತ್ರಜ್ಞಾನದ ಬಗ್ಗೆ ಭಾರತದಲ್ಲಿ ಅದ್ಭುತ ಉತ್ಸಾಹ ಕಂಡುಬರುತ್ತಿದೆ. ಇದು ಉದ್ಯೋಗ ಸೃಷ್ಟಿಯ ಉದಯೋನ್ಮುಖ ಸಾಧ್ಯತೆಗಳನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ತಂತ್ರಜ್ಞಾನವನ್ನು ಒಂದು ಸಮಸ್ಯೆಯನ್ನಾಗಿ ಕಾಣಲಾಗಿತ್ತಲ್ಲದೆ, ಅದನ್ನು ಬಡವರ ವಿರೋಧಿ ಎಂದು ಬಿಂಬಿಸುವ ಯತ್ನ ನಡೆದಿತ್ತು. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಸಮಸ್ಯೆಗೆ ಒಳಗಾದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲು ಪಿಸುವಲ್ಲಿ ತಂತ್ರಜ್ಞಾನವು ಬಹಳಷ್ಟು ನೆರವಾಗಿದೆ ಎಂದು ಮೋದಿ ಹೇಳಿದರು. ‘ಭಾರತ್ ಡ್ರೋನ್ ಮಹೋತ್ಸವ್’ ಕಾರ್ಯಕ್ರಮವು ಶುಕ್ರವಾರ ಮತ್ತು ಶನಿವಾರ ದೆಹಲಿಯಲ್ಲಿ ನಡೆಯುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.