ನವದೆಹಲಿ: ಹೈದರಾಬಾದ್– ಬೆಂಗಳೂರು ಮಾರ್ಗದ ರೈಲು ಸೇರಿದಂತೆ ದೇಶದ ವಿವಿಧ ಭಾಗಗಳ ನಡುವೆ ಸಂಚರಿಸಲಿರುವ ಒಟ್ಟು 9 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 24ರಂದು ಹಸಿರು ನಿಶಾನೆ ತೋರಲಿದ್ದಾರೆ.
ಹೈದರಾಬಾದ್ (ಕಾಚಿಗುಡ)– ಬೆಂಗಳೂರು (ಯಶವಂತಪುರ), ಚೆನ್ನೈ– ತಿರುನಲ್ವೇಲಿ, ವಿಜಯವಾಡ– ಚೆನ್ನೈ, ಪಟ್ನಾ– ಹೌರಾ, ರೌರ್‌ಕೇಲಾ– ಪುರಿ, ಕಾಸರಗೋಡು– ಅಲಪ್ಪುಳ– ತಿರುವನಂತಪುರಂ, ಜೈಪುರ– ಉದಯಪುರ, ರಾಂಚಿ– ಟಾಟಾ ನಗರ– ಕೋಲ್ಕತ್ತ, ಜಾಮಾನಗರ– ರಾಜ್‌ಕೋಟ್– ಅಹಮದಾಬಾದ್ ಮಾರ್ಗದ ರೈಲುಗಳಿಗೆ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ನವದೆಹಲಿಯಿಂದ ಚಾಲನೆ ನೀಡಲಿದ್ದಾರೆ.
ಗೋರಖ್‌ಪುರ– ಲಖನೌ ಹಾಗೂ ಜೋಧಪುರ– ಸಬರಮತಿ ನಡುವಿನ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಎರಡು ತಿಂಗಳ ಬಳಿಕ ಈ ರೈಲುಗಳಿಗೆ ಹಸಿರು ನಿಶಾನೆ ತೋರಲಾಗುತ್ತಿದೆ.
ಕಾಸರಗೋಡು– ತಿರುವನಂತಪುರ ಮಾರ್ಗ ಮಧ್ಯದ ರೈಲು ಇದೇ ಮೊದಲ ಬಾರಿಗೆ ಕೇಸರಿ ಬಣ್ಣದಲ್ಲಿರಲಿದೆ. ಉಳಿದ ರೈಲುಗಳು ನೀಲಿ– ಬಿಳಿ ಬಣ್ಣಗಳ ಸಂಯೋಜನೆಯಲ್ಲಿರಲಿವೆ.
ಪ್ರಸ್ತುತ ದೇಶದಾದ್ಯಂತ 25 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.