ADVERTISEMENT

ಪಿ.ಎಂ ವಿಶ್ವಕರ್ಮ ಯೋಜನೆ: ಸೆ.17ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ

ಪಿಟಿಐ
Published 15 ಸೆಪ್ಟೆಂಬರ್ 2023, 11:21 IST
Last Updated 15 ಸೆಪ್ಟೆಂಬರ್ 2023, 11:21 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ ಚಾಲನೆ</p></div>

ಪ್ರಧಾನಿ ನರೇಂದ್ರ ಮೋದಿ ಚಾಲನೆ

   

ನವದೆಹಲಿ: ‘ವಿಶ್ವಕರ್ಮ ಜಯಂತಿಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 17ರಂದು (ಭಾನುವಾರ) ‘ಪಿ.ಎಂ ವಿಶ್ವಕರ್ಮ’ ಎಂಬ ಹೊಸ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಯೋಜನೆಯಿಂದ ಸಾಂಪ್ರದಾಯಿಕ ಕೌಶಲ ಕಾರ್ಯಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಹಾಗೂ ಕರಕುಶಲಿಗಳಿಗೆ ಸಹಾಯವಾಗಲಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ADVERTISEMENT

ಸಾಂಪ್ರದಾಯಿಕ ಕರಕುಶಲ ವಸ್ತುಗಳ ನಿರ್ಮಾಣವನ್ನು ಕಸುಬಾಗಿಸಿಕೊಂಡಿರುವವರಿಗೆ ಆರ್ಥಿಕ ಸಹಾಯ ನೀಡಲಾಗುವುದು. ಸ್ಥಳೀಯ ಉತ್ಪನ್ನಗಳು, ಕಲೆ ಮತ್ತು ಕರಕುಶಲ ವಸ್ತುಗಳ ತಯಾರಿಕೆಗೆ ಬೆಂಬಲ ನೀಡುವುದು ಮೋದಿಯವರ ಆದ್ಯತೆಯಾಗಿದೆ’ ಎಂದು ಪ್ರಕಟಣೆ ಹೇಳಿದೆ.

ಪಿ.ಎಂ ವಿಶ್ವಕರ್ಮ ಯೋಜನೆ ಪ್ರಾರಂಭಿಸುವುದಾಗಿ ಮೋದಿ ಅವರು ಕಳೆದ ಸ್ವಾತಂತ್ರ್ಯ ದಿನದಂದು ಘೋಷಿಸಿದ್ದರು. ಇದಕ್ಕಾಗಿ ₹ 13 ಸಾವಿರ ಕೋಟಿಯಷ್ಟು ನಿಧಿಯನ್ನು ಮೀಸಲಿಡಲಾಗಿದೆ. 

₹ 15 ಸಾವಿರ ಮೌಲ್ಯದ ಟೂಲ್‌ಕಿಟ್‌, ಶೇಕಡಾ 5ರ ಬಡ್ಡಿ ದರದಲ್ಲಿ ₹ 2 ಲಕ್ಷದವರೆಗೆ ಆಧಾರ ರಹಿತ ಸಾಲ ನೀಡಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.