ADVERTISEMENT

ಆಸಿಯಾನ್-ಭಾರತ ಶೃಂಗಸಭೆ: ಅ. 10,11ಕ್ಕೆ ಮೋದಿ ಲಾವೊಸ್‌ ಭೇಟಿ

ಪಿಟಿಐ
Published 8 ಅಕ್ಟೋಬರ್ 2024, 14:29 IST
Last Updated 8 ಅಕ್ಟೋಬರ್ 2024, 14:29 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇದೇ 10 ಮತ್ತು 11ರಂದು ಎರಡು ದಿನ ಲಾವೊಸ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಮಂಗಳವಾರ ತಿಳಿಸಿದೆ.

ಈ ಭೇಟಿ ವೇಳೆ ಪ್ರಧಾನಿ ಮೋದಿ ಅವರು, ಲಾವೊಸ್‌ನಲ್ಲಿ ನಡೆಯಲಿರುವ 21ನೇ ಆಸಿಯಾನ್-ಭಾರತ ಶೃಂಗಸಭೆ ಮತ್ತು 19ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅದು ಹೇಳಿದೆ.

ಲಾವೊಸ್‌ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಕ್ಟೋಬರ್ 10-11ರಂದು ಭೇಟಿ ನೀಡಲಿದ್ದಾರೆ. ಈ ಶೃಂಗಸಭೆಗಳಲ್ಲಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆಯಿದೆ ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

‘ಈ ವರ್ಷ ಭಾರತ, ಪೂರ್ವ ಕೇಂದ್ರೀತ ನೀತಿಯನ್ನು ಅನುಸರಿಸುತ್ತ ಒಂದು ದಶಕವಾಗಲಿದ್ದು, ಆಸಿಯಾನ್‌ ಜೊತೆಗಿನ ಸಂಬಂಧವು ಪೂರ್ವ ಕೇಂದ್ರೀತ ನೀತಿ ಮತ್ತು ಇಂಡೋ–ಪೆಸಿಫಿಕ್ ಪ್ರದೇಶದ ತಂತ್ರಕ್ಕೆ ಆಧಾರ ಸ್ಥಂಭವಾಗಿದೆ’ ಎಂದು ಎಂಇಎ ಹೇಳಿದೆ.

ಆಸಿಯಾನ್-ಭಾರತ ಶೃಂಗಸಭೆಯು ‘ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ’ ಮೂಲಕ ಭಾರತ-ಆಸಿಯಾನ್ ಸಂಬಂಧಗಳ ಪ್ರಗತಿ ಪರಿಶೀಲನೆ ಮತ್ತು ದೇಶಗಳ ನಡುವೆ ಸಂಬಂಧ ಗಟ್ಟಿಗೊಳಿಸುವ ಕುರಿತು ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.