ADVERTISEMENT

ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ, ಯೋಧರ ಶೌರ್ಯದಲ್ಲಿ ನಂಬಿಕೆ ಇದೆ: ಮೋದಿ

ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 6:45 IST
Last Updated 15 ಫೆಬ್ರುವರಿ 2019, 6:45 IST
   

ನವದೆಹಲಿ:ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಗೌರವ ಸಮರ್ಪಿಸಿದರು. ದೆಹಲಿ–ವಾರಾಣಸಿ ಸಂಚರಿಸಲಿರುವ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಮುನ್ನ ಎರಡು ನಿಮಿಷಗಳ ಕಾಲ ಮೌನಾಚರಿಸಿದರು.

ಇದೇ ವೇಳೆ ಮಾತನಾಡಿದ ಅವರು, ‘ಪುಲ್ವಾಮಾ ದಾಳಿ ವೇಳೆ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ನಮ್ಮ ರಕ್ಷಣಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಶೌರ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ.ಭಯೋದ್ಪಾದನೆ ದಾಳಿಗೆ ಜವಾಬ್ದಾರರಾಗಿರುವ ಸಂಘಟನೆಗಳು ಖಂಡಿತ ಶಿಕ್ಷೆ ಅನುಭವಿಸಲಿವೆ’ಎಂದು ಹೇಳಿದರು.

ಶುಕ್ರವಾರದಂದು ನಿಗದಿಯಾಗಿದ್ದ ಪ್ರಧಾನಮಂತ್ರಿಯವರ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ADVERTISEMENT

**

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.