ADVERTISEMENT

ಗುಜರಾತ್‌ | ‘ತೌತೆ’ಯಿಂದ ಹಾನಿ: ಪ್ರಧಾನಿಯಿಂದ ವೈಮಾನಿಕ ಸಮೀಕ್ಷೆ

ಪಿಟಿಐ
Published 19 ಮೇ 2021, 10:12 IST
Last Updated 19 ಮೇ 2021, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಹಮದಾಬಾದ್‌: ಗುಜರಾತ್‌ ಹಾಗೂ ನೆರೆಯ ಕೇಂದ್ರಾಡಳಿತ ಪ್ರದೇಶ ದಿಯುವಿನಲ್ಲಿ ತೌತೆ ಚಂಡಮಾರುತದಿಂದಾದ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದರು.

ದೆಹಲಿಯಿಂದ ಭಾವ್‌ನಗರಕ್ಕೆ ಮಧ್ಯಾಹ್ನ ಬಂದಿಳಿದ ನಂತರ ಅವರು, ಉನಾ, ದಿಯು, ಜಾಫರಾಬಾದ್‌ ಹಾಗೂ ಮಹುವಾ ಪ್ರದೇಶಗಳಲ್ಲಿ ಆಗಿರುವ ಹಾನಿಯ ವೈಮಾನಿಕ ಸಮೀಕ್ಷೆ ನಡೆಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಿರ್‌–ಸೋಮನಾಥ್‌, ಭಾವ್‌ನಗರ ಹಾಗೂ ಅಮ್ರೇಲಿ ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ದಿಯು ಮತ್ತು ಉನಾ ಪಟ್ಟಣದ ನಡುವೆ ಸೋಮವಾರ ತಡರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಈ ಕುರಿತು ಅವರು ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ADVERTISEMENT

ಅಹಮದಾಬಾದ್‌ನಲ್ಲಿ ಮೋದಿ ಅವರು ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.