ADVERTISEMENT

ಒಡಿಶಾ: ₹68,000 ಕೋಟಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:13 IST
Last Updated 3 ಫೆಬ್ರುವರಿ 2024, 16:13 IST
ಒಡಿಶಾದ ಸಂಬಲ್‌ಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (03.02.24) ಚಾಲನೆ ನೀಡಿದರು.
ಪಿಟಿಐ ಚಿತ್ರ
ಒಡಿಶಾದ ಸಂಬಲ್‌ಪುರದಲ್ಲಿ ವಿವಿಧ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (03.02.24) ಚಾಲನೆ ನೀಡಿದರು. ಪಿಟಿಐ ಚಿತ್ರ   

ಸಂಬಲ್‌ಪುರ (ಒಡಿಶಾ) (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾದಲ್ಲಿ ಶನಿವಾರ ₹68,000 ಕೋಟಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

₹400 ಕೋಟಿ ವೆಚ್ಚದ ಸಂಬಲ್‌ಪುರದ ಐಐಎಂ ಕ್ಯಾಂಪಸ್‌ಗೆ ಅಡಿಗಲ್ಲು ಹಾಕಿದ ಪ್ರಧಾನಿ ಮೋದಿ, ವಿದ್ಯುತ್, ರಸ್ತೆಗಳು, ರೈಲ್ವೆ ಮತ್ತಿತರ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು.           

18 ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, ‘ಈ ಯೋಜನೆಗಳಿಂದ ರಾಜ್ಯದ ಯುವಜನತೆಗೆ ನೆರವು ಸಿಗಲಿದ್ದು, ಉದ್ಯೋಗ ಸೃಷ್ಟಿ ಆಗಲಿದೆ.  ಕೇಂದ್ರ ಸರ್ಕಾರವು ಪ್ರತಿಯೊಂದು ಕ್ಷೇತ್ರದಲ್ಲೂ ಒಡಿಶಾಗೆ ಬೆಂಬಲ ನೀಡುತ್ತಿದೆ‘ ಎಂದು ಹೇಳಿದರು.

ADVERTISEMENT

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯಪಾಲ ರಘುಬರ್ ದಾಸ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಬಿಶ್ವೇಶ್ವರ್ ತುಡು ಹಾಗೂ ಅಶ್ವಿನಿ ವೈಷ್ಣವ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.