ADVERTISEMENT

ಜಾರ್ಖಂಡ್: 32ಸಾವಿರ ಫಲಾನುಭವಿಗಳಿಗೆ ಆವಾಸ್‌ ಯೋಜನೆಯ ಮಂಜೂರಾತಿ ಪತ್ರ ನೀಡಿದ ಮೋದಿ

ಪಿಟಿಐ
Published 15 ಸೆಪ್ಟೆಂಬರ್ 2024, 6:21 IST
Last Updated 15 ಸೆಪ್ಟೆಂಬರ್ 2024, 6:21 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರ

ರಾಂಚಿ: ಪ್ರಧಾನಮಂತ್ರಿ ಗ್ರಾಮೀಣ ಆವಾಸ್‌ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿಯವರು ಜಾರ್ಖಂಡ್‌ನ ರಾಂಚಿಯಲ್ಲಿ 32 ಸಾವಿರ ಫಲಾನುಭವಿಗಳಿಗೆ ವರ್ಚುವಲ್ ಮೂಲಕ ಮನೆ ನಿರ್ಮಾಣ ಮಂಜೂರಾತಿ ಪತ್ರವನ್ನು ವಿತರಿಸಿದರು. ಇದೇ ವೇಳೆ ಮನೆಗಳ ನಿರ್ಮಾಣಕ್ಕೆ ನೀಡುವ ಹಣದ ಮೊದಲ ಕಂತಿನ ₹32 ಕೋಟಿ ಬಿಡುಗಡೆ ಮಾಡಿದರು.

ADVERTISEMENT

ಆವಾಸ್‌ ಯೋಜನೆಯಡಿ ಜಾರ್ಖಂಡ್‌ನಲ್ಲಿ ಬಡವರಿಗೆ 1,13,400 ಮನೆಗಳ ನಿರ್ಮಾಣಕ್ಕೆ ಕೇಂದ್ರವು ಅನುಮೋದಿಸಿದೆ.

ಇದೇ ಸಂದರ್ಭದಲ್ಲಿ ದೇಶದಾದ್ಯಂತ ಯೋಜನೆಯ ಪ್ರಯೋಜನ ಪಡೆದ 46,000 ಫಲಾನುಭವಿಗಳಿಗೆ ಮನೆಗಳ ಕೀಗಳನ್ನು ವರ್ಚುವಲ್‌ ಮೂಲಕ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಿದರು.

₹660 ಕೋಟಿ ಯೋಜನೆಗೆ ಚಾಲನೆ

ಜಾರ್ಖಂಡ್‌ನಲ್ಲಿ ₹660 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಮೋದಿ ವರ್ಚುವಲ್‌ ಮೂಲಕ ಚಾಲನೆ ನೀಡಿದರು.

ದಿಯೋಘರ್ ಜಿಲ್ಲೆಯ ಮಧುಪುರ್ ಬೈಪಾಸ್ ಲೈನ್ ಮತ್ತು ಹಜಾರಿಬಾಗ್ ಟೌನ್ ಕೋಚಿಂಗ್ ಡಿಪೋದ ಶಂಕುಸ್ಥಾಪನೆ ಕೂ ಈ ಯೋಜನೆಯಲ್ಲಿ ಸೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.