ಕಲ್ಪಕಂ: ವಿದ್ಯುತ್ ಉತ್ಪಾದನೆ ಉದ್ದೇಶದಿಂದ ತಮಿಳುನಾಡಿನ ಕಲ್ಪಕಂನಲ್ಲಿ ಸ್ಥಾಪಿಸಲಾಗಿರುವ ಪರಮಾಣು ವಿದ್ಯುತ್ ಸ್ಥಾವರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭೇಟಿ ನೀಡಿದರು.
ಸ್ವದೇಶಿ ನಿರ್ಮಿತ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಅಳವಡಿಸಿಕೊಂಡು ಕಾರ್ಯಾರಂಭ ಮಾಡಿರುವ ಕೋರ್ ಲೋಡಿಂಗ್ ಸ್ಥಾವರವು ಚೆನ್ನೈನ 60 ಕಿ.ಮೀ. ದೂರದ ಕಲ್ಪಾಕಂನಲ್ಲಿದೆ. ಪ್ರಧಾನಿ ಸಮ್ಮುಖದಲ್ಲಿ ಈ ಸ್ಥಾವರ ಕಾರ್ಯಾರಂಭ ಮಾಡಿದೆ.
500 ಮೆಗಾ ವ್ಯಾಟ್‌ನ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಅನ್ನು ಭಾರತೀಯ ನಾಭಿಕಿಯಾ ವಿದ್ಯುತ್ ನಿಗಮ (BHAVINI) ಅಭಿವೃದ್ಧಿಪಡಿಸಿದೆ.
ಈ ಸ್ಥಾವರದಲ್ಲಿ ಕಂಟ್ರೋಲ್ ಸಬ್ ಅಸೆಂಬ್ಲಿ, ಬ್ಲಾಂಕೆಟ್ ಸಬ್ ಅಸೆಂಬ್ಲಿ ಮತ್ತು ಫ್ಯೂಯಲ್ ಸಬ್ ಅಸೆಂಬ್ಲಿಗಳು ಇವೆ. ಕೋರ್ ಲೋಡಿಂಗ್ ಚಟುವಟಿಕೆಗಳು ನಡೆಯುತ್ತಿವೆ. ವಿವಿಧ ಹಂತಗಳಲ್ಲಿ ಪರಮಾಣು ಬಳಸಿ ಇಲ್ಲಿ ವಿದ್ಯುತ್ ಉತ್ಪಾದನೆ ನಡೆಯಲಿದೆ. ಇಂಧನ ಸಬ್ ಅಸೆಂಬ್ಲಿಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿವ್ ದೇವೋಲ್ ಅವರು ಪ್ರಧಾನಿ ಅವರೊಂದಿಗೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.