ADVERTISEMENT

ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಮೋದಿ ಶುಭಾಶಯ: ಇಮ್ರಾನ್‌ ಖಾನ್‌ ಟ್ವೀಟ್‌

ಪಿಟಿಐ
Published 23 ಮಾರ್ಚ್ 2019, 5:54 IST
Last Updated 23 ಮಾರ್ಚ್ 2019, 5:54 IST
   

ಬೆಂಗಳೂರು: ಪಾಕಿಸ್ತಾನ ರಾಷ್ಟ್ರೀಯ ದಿನದ ಮುನ್ನಾದಿನವಾದ ಶುಕ್ರವಾರದಂದು(ಮಾ.22) ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ನಾಗರಿಕರಿಗೆ ಶುಭಾಶಯ ಕೋರಿದ್ದು, ಈ ಬಗ್ಗೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಇಮ್ರಾನ್‌ ಟ್ವಿಟರ್‌ನಲ್ಲಿ ಬರೆದಿರುವಂತೆ ಮೋದಿ ಅವರು, ‘ಪಾಕಿಸ್ತಾನ ಜನರಿಗೆ ರಾಷ್ಟ್ರೀಯ ದಿನದ ಅಂಗವಾಗಿ ಶುಭಾಶಯ ಕೊರುತ್ತೇನೆ. ಉಪಕಂಡದ ಜನರುಭಯೋತ್ಪಾದನೆ ಹಾಗೂ ಗಲಭೆಮುಕ್ತ ವಾತಾವರಣದಲ್ಲಿಪ್ರಜಾಪ್ರಭುತ್ವ, ಶಾಂತಿಯುತ, ಪ್ರಗತಿಪರ ಹಾಗೂ ಪ್ರಾದೇಶಿಕ ಸಮೃದ್ಧತೆ ನಿರ್ಮಿಸಲು ಒಟ್ಟಾಗಿ ಕೆಲಸಮಾಡಬೇಕಾದ ಸಮಯವಿದು’ ಎಂದು ಶಾಂತಿ ಸಂದೇಶ ನೀಡಿದ್ದಾರೆ.

ನನ್ನ ದೇಶದ ಜನರಿಗೆ ಪ್ರಧಾನಿ ಮೋದಿ ಅವರು ನೀಡಿದ ಸಂದೇಶವನ್ನು ಸ್ವಾಗತಿರುವ ಇಮ್ರಾನ್‌, ‘ಪಾಕಿಸ್ತಾನ ರಾಷ್ಟ್ರಿಯ ದಿನಾಚರಣೆ ಸಂದರ್ಭದಲ್ಲಿ ಉಭಯ ದೇಶಗಳ ನಡುವಣ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದ ಜೊತೆ ಸಮಗ್ರ ಮಾತುಕತೆ ಆರಂಭಿಸುವ ಕಾಲ ಇದು ಎಂದು ನಂಬಿದ್ದೇನೆ’ ಎಂದು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಪಾಕ್ ರಾಷ್ಟ್ರೀಯ ದಿನದ ಅಂಗವಾಗಿ ನವದೆಹಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಭೋಜನ ಕೂಟಕ್ಕೆ ಕಾಶ್ಮೀರ ಪ್ರತ್ಯೇಕತಾವಾದಿ ಹುರಿಯತ್‌ ನಾಯಕರಿಗೆ ಆಹ್ವಾನ ನೀಡಲಾಗಿದೆಯೇ ಎಂದು ಭಾರತ ಪ್ರಶ್ನಿಸಿತ್ತು. ಆದರೆ ಆ ದೇಶದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಹೀಗಾಗಿ ವಿದೇಶಾಂಗ ಸಚಿವಾಲಯವು ಕಾರ್ಯಕ್ರಮದಿಂದ ಹಿಂದೆ ಸರಿದಿತ್ತು. ಇದಾದ ಕೆಲ ಹೊತ್ತಿನಲ್ಲೇ ಮೋದಿ ಶುಭಾಶಯ ಸಂದೇಶದ ಸುದ್ದಿ ಪ್ರಸಾರವಾಗಿದೆ.

ಶನಿವಾರ ಇಸ್ಲಾಮಾಬಾದ್‌ನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವನ್ನೂ ದೇಶದ ಯಾರೊಬ್ಬರು ಪ್ರತಿನಿಧಿಸುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಪಿತ್ರೋಡಾ ವಿರುದ್ಧ ಹರಿಹಾಯ್ದಿದ್ದ ಮೋದಿ
ಪಾಕಿಸ್ತಾನದಲ್ಲಿದ್ದ ಭಯೋತ್ಪಾದಕರ ತರಬೇತಿ ಶಿಬಿರಗಳ ಮೇಲೆ ವಾಯುಪಡೆ ನಡೆಸಿದ ದಾಳಿಗೆ ಪುರಾವೆ ಕೇಳಿದ ಕಾಂಗ್ರೆಸ್‌ನ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್‌ ಪಿತ್ರೋಡಾ ವಿರುದ್ಧ ಮೋದಿ ಟೀಕಾ ಪ್ರಹಾರ ನಡೆಸಿದ್ದರು.

ರಾಹುಲ್‌ ಗಾಂಧಿಯ ಆಪ್ತರೂ ಆಗಿರುವಪಿತ್ರೋಡಾ ಹಾಗೂ ಕಾಂಗ್ರೆಸ್‌ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ದಾಳಿಯ ಬಗ್ಗೆ ಶಂಕೆ ವ್ಯಕ್ತಪಡಿಸುವ ಮೂಲಕ ಪಿತ್ರೋಡಾ ಅವರು ಕಾಂಗ್ರೆಸ್‌ ಪರವಾಗಿ ‘ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆ’ಗೆ ಚಾಲನೆ ನೀಡಿದ್ದಾರೆ. ಭಯೋತ್ಪಾದಕರ ಬಗ್ಗೆ ಮೃದು ಧೋರಣೆ ತಳೆಯುವುದು ಮತ್ತು ಸೇನೆಯನ್ನು ನಿಂದಿಸುವುದು ಕಾಂಗ್ರೆಸ್‌ನ ಸಹಜ ಸ್ವಭಾವ’ ಎಂದು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ಗಳ ಮೂಲಕಹರಿಹಾಯ್ದಿದ್ದರು.

ಇಮ್ರಾನ್‌ ಟ್ವೀಟ್‌ ಮಾಡಿದ ಬಳಿಕಮೋದಿ ಹೇಳಿಕೆಗಳ(ಟ್ವೀಟ್‌ಗಳ) ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.