ರಾಯಪುರ: ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಛತ್ತೀಸಗಢದಲ್ಲಿ ಐದು ರ‍್ಯಾಲಿಗಳನ್ನು ನಡೆಸಿದ್ದರು.
ಕಾಂಕೆರ್, ದುರ್ಗ್, ಸೂರಜ್‌ಪುರ್, ಮುಂಗೆಲಿ ಮತ್ತು ಮಹಾಸಮುಂದ್ ಜಿಲ್ಲೆಗಳಲ್ಲಿ ಅವರು ರ‍್ಯಾಲಿ ನಡೆಸಿದ್ದರು. ‘ಛತ್ತೀಸಗಢವನ್ನು ರಚಿಸಿದ್ದೇ ಬಿಜೆಪಿ, ರಾಜ್ಯವನ್ನು ಸಲಹುವುದೂ ಬಿಜೆಪಿಯೇ’ ಎಂಬ ಘೋಷಣೆಯನ್ನು ಅವರು ರ‍್ಯಾಲಿಗಳಲ್ಲಿ ಮೊಳಗಿಸಿದ್ದರು.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ್ದ ಅವರು, ಬಿಜೆಪಿಯ ಗ್ಯಾರಂಟಿಗಳನ್ನು ‘ಮೋದಿ ಗ್ಯಾರಂಟಿ’ ಎಂದು ಕರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.