ADVERTISEMENT

ಮೋದಿಯವರ 3ನೇ ಅವಧಿಯಲ್ಲಿ 140 ಕೋಟಿ ಜನರ ಆಕಾಂಕ್ಷೆಗಳು ಈಡೇರಲಿವೆ: ಆದಿತ್ಯನಾಥ್

ಪಿಟಿಐ
Published 24 ಜೂನ್ 2024, 10:27 IST
Last Updated 24 ಜೂನ್ 2024, 10:27 IST
ಸಿಎಂ ಯೋಗಿ ಆದಿತ್ಯನಾಥ್‌
ಸಿಎಂ ಯೋಗಿ ಆದಿತ್ಯನಾಥ್‌   

ಲಖನೌ: ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮೂರನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಿಮ್ಮ ಯಶಸ್ವಿ ನಾಯಕತ್ವದ ಅಡಿಯಲ್ಲಿ, ಆತ್ಮನಿರ್ಭರ ಭಾರತ– ವಿಕಸಿತ ಭಾರತದ (ಸ್ವಾವಲಂಬಿ, ಅಭಿವೃದ್ಧಿ ಭಾರತ) ಕನಸುಗಳು ನನಸಾಗುತ್ತಿವೆ’ ಎಂದು ಬರೆದುಕೊಂಡಿದ್ದಾರೆ.

ನಿಸ್ಸಂದೇಹವಾಗಿ, ಪ್ರಧಾನಿ ಮೋದಿ ಅವರ ಮೂರನೇ ಅವಧಿಯಲ್ಲಿ 140 ಕೋಟಿ ದೇಶವಾಸಿಗಳ ಆಕಾಂಕ್ಷೆಗಳು ಮತ್ತು ಅಮೃತ ಕಾಲದ ಎಲ್ಲ ಸಂಕಲ್ಪಗಳು ಈಡೇರುತ್ತವೆ ಎಂದು ಆದಿತ್ಯನಾಥ್‌ ಹೇಳಿದ್ದಾರೆ.

ADVERTISEMENT

ಇಂದು (ಸೋಮವಾರ) ನಡೆದ 18ನೇ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ವಾರಾಣಸಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. 2014ರಿಂದಲೂ ವಾರಾಣಸಿ ಕ್ಷೇತ್ರವನ್ನು ಮೋದಿ ಪ್ರತಿನಿಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.