ನವದೆಹಲಿ: ರಾಜಕಾರಣದಲ್ಲಿ ನಾವುವಿರೋಧಿಗಳೇಆಗಿದ್ದರೂ, ಪ್ರತಿ ವರ್ಷ ಮಮತಾ ಬ್ಯಾನರ್ಜಿ ನನಗಾಗಿ ಕುರ್ತಾ ಆಯ್ಕೆ ಮಾಡಿ ಅದನ್ನುಉಡುಗೊರೆಯಾಗಿಕಳಿಸಿಕೊಡುತ್ತಾರೆ.ನನಗೆ ಬಂಗಾಳದ ಸಿಹಿತಿಂಡಿ ಇಷ್ಟವಾಗಿದ್ದರಿಂದ ಅದನ್ನೂ ಕಳುಹಿಸಿಕೊಡುತ್ತಾರೆ ಎಂದುಪ್ರಧಾನ ನರೇಂದ್ರ ಮೋದಿ ಹೇಳಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮೋದಿಯವರ ಸಂದರ್ಶನ ನಡೆಸಿದ್ದು, ಇದರಲ್ಲಿ ಮೋದಿ ಮಮತಾ ಬ್ಯಾನರ್ಜಿ ಅವರ ಬಗ್ಗೆ ಮಾತನಾಡಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಾಗ್ದಾಳಿ ನಡೆಸಿದ್ದ ಮೋದಿ, ಮಮತಾ ಬ್ಯಾನರ್ಜಿಯನ್ನು ಸ್ಪೀಡ್ ಬ್ರೇಕರ್ ದೀದಿ ಎಂದಿದ್ದರು. ಇದಕ್ಕೆ ಪ್ರತಿಯಾಗಿ ಮಮತಾ, ಮೋದಿಯವರನ್ನು ಎಕ್ಸ್‌ಪೈರಿ ಬಾಬು ಎಂದು ತಿರುಗೇಟು ನೀಡಿದ್ದರು.
ಬಾಂಗ್ಲಾದೇಶದ ಪ್ರಧಾನಿ ತನಗೆ ಢಾಕಾದಿಂದ ಬಂಗಾಳದ ಸಿಹಿತಿಂಡಿ ಕಳುಹಿಸಿಕೊಡುತ್ತಾರೆ ಎಂದು ತಿಳಿದಾಗಿನಿಂದ ಮಮತಾ ನನಗೆ ಬಂಗಾಳದ ಸಿಹಿತಿಂಡಿ ಕಳುಹಿಸಿ ಕೊಡುತ್ತಾರೆ ಎಂದಿದ್ದಾರೆಮೋದಿ.
ವಿರೋಧ ಪಕ್ಷ ನಾಯಕರ ಜತೆಗಿನಸಂಬಂಧ ಬಗ್ಗೆ ವಿವರಿಸಿದ ಮೋದಿ, ನಾವು ಉತ್ತಮ ಸಂಬಂಧ ಹೊಂದಿದ್ದೇವೆ ಎಂದಿದ್ದಾರೆ. ಇದಕ್ಕೆ ಉದಾಹರಣೆಯಾಗಿ ಕಾಂಗ್ರೆಸ್ನಾಯಕ ಗುಲಾಂ ನಬೀ ಆಜಾದ್ ಅವರ ಜತೆ ನಾನು ಸಂಸತ್‍ನಲ್ಲಿ ನಾನು ತುಂಬಾ ಹೊತ್ತು ಮಾತನಾಡುತ್ತಿದ್ದೆ.ನಮ್ಮ ಮೈತ್ರಿ ಹೆಚ್ಚಿನವರಿಗೆ ಅಚ್ಚರಿ ಹುಟ್ಟಿಸಿತ್ತು.ಈ ಬಗ್ಗೆ ಕೇಳಿದವರಿಗೆ ಆಜಾದ್ ಸರಿಯಾದ ಉತ್ತರವನ್ನೇ ನೀಡಿದ್ದರು. ನೀವು ಅಂದುಕೊಂಡಂತೆ ಅಲ್ಲ, ನಾವೆಲ್ಲಾ ಒಂದೇ ಕುಟುಂಬವರು ಎಂದಿದ್ದರು ಆಜಾದ್.
ದೆಹಲಿಯ 7 ಲೋಕ ಕಲ್ಯಾಣ ಮಾರ್ಗ್‌ದಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಟಅಕ್ಷಯ್ ಕುಮಾರ್ ಮೋದಿಯವರ ಸಂದರ್ಶನ ನಡೆಸಿದ್ದಾರೆ.
ಮೋದಿಯವರ ಕುಟುಂಬ ಜೀವನದ ಬಗ್ಗೆ ಕೇಳಿದಾಗ, ತನ್ನ ಯೌವನದಲ್ಲೇ ಅದರಿಂದ ಮುಕ್ತವಾಗಿದ್ದೇನೆ. ನಾನು ಅದರಿಂದ ಸಂಪೂರ್ಣ ಹೊರ ಬಂದಿದ್ದೇನೆ.ಈ ಬಗ್ಗೆ ಕೇಳಿ ಸಮಯ ವ್ಯರ್ಥ ಮಾಡುವುದು ಬೇಡ ಎಂದಿದ್ದಾರೆ.
ಮೂರು ಗಂಟೆಗಳ ಕಾಲ ಮಾತ್ರ ನಿದ್ರೆ ಮಾಡುವ ನೀವು ಇಡೀ ದಿನ ಹೇಗೆ ಲವಲವಿಕೆಯಿಂದಇರುತ್ತೀರಿ? ಎಂಬ ಪ್ರಶ್ನೆಗೆ ಮೋದಿಯವರ ಉತ್ತರ ಹೀಗಿತ್ತು. 'ನಾನು ಒಬಾಮ ಅವರನ್ನು ಭೇಟಿಯಾದಾಗ ಅವರು ಕೂಡಾ ಇದೇ ಪ್ರಶ್ನೆಯನ್ನು ಕೇಳಿದ್ದರು.ನಾನು ಈ ರೀತಿ ಯಾಕೆ ಕಡಿಮೆ ನಿದ್ದೆ ಮಾಡುತ್ತೀನಿ ಎಂದು ಅವರು ಕೇಳುತ್ತಾರೆ.ಅವರು ನನ್ನನ್ನು ಭೇಟಿಯಾದಾಗಲೆಲ್ಲಾ ಕೇಳುವ ಪ್ರಶ್ನೆ ನಾನು ಹೆಚ್ಚು ಸಮಯ ನಿದ್ದೆ ಮಾಡುವುದನ್ನು ರೂಢಿ ಮಾಡಿದ್ದೇನಾ ಇಲ್ಲವಾ?'ಎಂಬುದಾಗಿತ್ತು.
ಇನ್ನುಳಿದಂತೆ ಅಕ್ಷಯ್ ಕುಮಾರ್ ಕೇಳಿದ ಪ್ರಶ್ನೆಗಳಿಗೆಮೋದಿ ಉತ್ತರ ಹೀಗಿತ್ತು
ಪ್ರಶ್ನೆ:ನಿಮಗೆ ಮಾವಿನ ಹಣ್ಣು ಇಷ್ಟವಾ?
ಉತ್ತರ: ಮಾವಿನ ಹಣ್ಣು ತುಂಬಾ ಇಷ್ಟ
ಪ್ರಶ್ನೆ:ಮೀಮ್ ಬಗ್ಗೆ?
ಉತ್ತರ:ನಾನು ಮೀಮ್ ನೋಡಿ ಖುಷಿ ಪಡುತ್ತೇನೆ. ಮೀಮ್‌ನಲ್ಲಿರುವ ಮೋದಿಗಿಂತ ಅದರಲ್ಲಿರುವ ಸೃಜನಶೀಲತೆ ನನಗೆ ಇಷ್ಟ.
ಪ್ರಶ್ನೆ: ಬಾಲ್ಯದಲ್ಲಿ ನಿಮಗೆ ಏನಾಗಬೇಕೆಂಬ ಆಸೆ ಇತ್ತು?
ಉತ್ತರ:ನನಗೆ ಯೋಧನಾಗಬೇಕೆಂಬ ಆಸೆ ಇತ್ತು. ಯೋಧರ ಸಮವಸ್ತ್ರದ ಮೇಲೆ ತುಂಬಾ ಗೌರವವಿದೆ. ಗಡಿಭಾಗದಲ್ಲಿ ಯೋಧರನ್ನು ಕಂಡಾಗ ಹೆಮ್ಮೆಯಿಂದ ಸೆಲ್ಯೂಟ್ ಮಾಡುತ್ತೇನೆ.
ಪ್ರಶ್ನೆ:ಅಲ್ಲಾದೀನ್‌ನ ದೀಪದಿಂದ ಬರುವ ಜಿನ್ನಿಯಲ್ಲಿ ನೀವು ಏನು ಬಯಸುತ್ತೀರಿ?
ಉತ್ತರ:ಮೊದಲಿಗೆ ಅಲ್ಲಾದೀನ್‌ನ್ನು ಅಲ್ಲಾವುದ್ದೀನ್ ಎಂದು ತಪ್ಪಾಗಿ ಹೇಳಿದ ಮೋದಿ, ಈ ರೀತಿಯ ಕತೆ ಹೇಳುವವರ ನೆನಪಿನಿಂದ ಅಲ್ಲಾದೀನ್ ದೀಪದ ಕತೆಯನ್ನು ಅಳಿಸಬೇಕು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.