ಮಾಮಲ್ಲಪುರಂ:ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಎರಡು ದಿನದ ಪ್ರವಾಸಕ್ಕಾಗಿ ಶುಕ್ರವಾರ ಭಾರತಕ್ಕೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಷಿ ಅವರುತಮಿಳುನಾಡಿನ ಕಡಲತಡಿಯ ಪ್ರವಾಸಿತಾಣ ಮಾಮಲ್ಲಪುರಂಗೆ ಭೇಟಿ ನೀಡಿದರು.
ಮಧ್ಯಾಹ್ನ ಚೆನ್ನೈನ ವಿಮಾನನಿಲ್ದಾಣಕ್ಕೆ ಬಂದಿಳಿದಿದ್ದ ಷಿ ಜಿನ್‌ಪಿಂಗ್ ಅವರು ಸಂಜೆ ಮಾಮಲ್ಲಪುರಂಗೆ ಬಂದಿಳಿದಾಗ ನರೇಂದ್ರ ಮೊದಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಬಳಿಕ, ಇಬ್ಬರೂ ನಾಯಕರು ಪ್ರವಾಸಿ ತಾಣದಲ್ಲಿ ವಿಹರಿಸಿದರು. ಈ ವೇಳೆ ನರೇಂದ್ರ ಮೊದಿ ಅವರು, ಸ್ಥಳದ ಐತಿಹಾಸಿಕ ಮಹತ್ವ ಹಾಗೂ ಪರಂಪರೆಯ ಕುರಿತು ಷಿ ಅವರಿಗೆ ಮಾಹಿತಿ ನೀಡಿದರು. ಇಬ್ಬರೂ ಕುಶಲೋಪರಿಯಲ್ಲಿ ತೊಡಗಿ ಪ್ರವಾಸಿತಾಣದ ವೀಕ್ಷಣೆ ಮಾಡಿದರು.
ಇಲ್ಲಿನ ಪಂಚ ರಥ ಸಮುಚ್ಚಯದ ಬಳಿ ಕುಳಿತು ಇಬ್ಬರೂ ನಾಯಕರು ಎಳನೀರು ಸೇವಿಸುತ್ತಾ, ಸ್ಥಳದ ಮಾಹಿತಿ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.