ADVERTISEMENT

ಮೋದಿ ಸರ್ಕಾರದಿಂದ ಜಮ್ಮು – ಕಾಶ್ಮೀರದಲ್ಲಿ ಯಾವ ಬದಲಾವಣೆಯೂ ಆಗಿಲ್ಲ: ಅಬ್ದುಲ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2024, 10:01 IST
Last Updated 25 ಜುಲೈ 2024, 10:01 IST
<div class="paragraphs"><p>ಒಮರ್ ಅಬ್ದುಲ್ಲಾ</p></div>

ಒಮರ್ ಅಬ್ದುಲ್ಲಾ

   

ಜಮ್ಮು: ಅಮೆರಿಕ ತನ್ನ ನಾಗರಿಕರಿಗೆ ಪ್ರಕಟಿಸಿರುವ ಪ್ರವಾಸ ಮಾರ್ಗಸೂಚಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಮುಖ್ಯಸ್ಥ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಭಾರತ – ಪಾಕಿಸ್ತಾನ ಗಡಿ ಹಾಗೂ ದೇಶದಲ್ಲಿ ನಕ್ಸಲರು ಸಕ್ರಿಯವಾಗಿರುವ ಕೇಂದ್ರ ಹಾಗೂ ಪೂರ್ವದ ಕೆಲವು ಪ್ರದೇಶಗಳಿಗೆ ಭೇಟಿ ನೀಡದಂತೆ ಅಮೆರಿಕ ತನ್ನ ನಾಗರಿಕರಿಗೆ ಸಲಹೆ ನೀಡಿದೆ. ಈ ಸಂಬಂಧ ಅಬ್ದುಲ್ಲಾ ಎಕ್ಸ್‌/ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ADVERTISEMENT

'ಹೊಸ ಜಮ್ಮು ಮತ್ತು ಕಾಶ್ಮೀರದ ಪಾಲಿಗೆ ಇದು ಅತಿಯಾಯಿತು' ಎಂದು ಉಲ್ಲೇಖಸಿರುವ ಅವರು, 'ಸಹಜ ಸ್ಥಿತಿ, ಶಾಂತಿ, ಪ್ರವಾಸೋದ್ಯಮ ಹಾಗೂ ಶ್ರೀನಗರದಲ್ಲಿನ ಜಿ–20 ತಮಾಷೆ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಅಮೆರಿಕ ಸರ್ಕಾರ ತನ್ನ ಪ್ರವಾಸ ಮಾರ್ಗಸೂಚಿಯಲ್ಲಿ ಈಗಲೂ ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸುತ್ತಿದೆ' ಎಂದು ಹೇಳಿದ್ದಾರೆ.

ಮುಂದುವರಿದು, 'ಮೋದಿ ಸರ್ಕಾರಕ್ಕೆ ಯಾವ ಬದಲಾವಣೆಯನ್ನೂ ತರಲು ಸಾಧ್ಯವಾಗಿಲ್ಲ' ಎಂದು ಕಾಲೆಳೆದಿದ್ದಾರೆ.

ಅಮೆರಿಕವು ತನ್ನ ಮಾರ್ಗಸೂಚಿಯಲ್ಲಿ, ಜಮ್ಮು ಮತ್ತು ಕಾಶ್ಮೀರವನ್ನು 'ಉಗ್ರರ ದಾಳಿ' ಹಾಗೂ 'ನಾಗರಿಕ ಅಶಾಂತಿ' ಇರುವ ‍ಪ್ರದೇಶವೆಂದು ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ, ಪಾಕಿಸ್ತಾನ ಸೇನೆ 'ಹಠಾತ್‌ ಸಂಘರ್ಷ'ದಲ್ಲಿ ತೊಡಗುತ್ತವೆ ಎಂದಿರುವುದನ್ನೂ ಒಮರ್ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.