ಕೋಪನ್ ಹೇಗನ್: ‘ಒಳಗೊಳ್ಳುವಿಕೆ ಹಾಗೂ ಸಾಂಸ್ಕೃತಿಕ ವೈವಿಧ್ಯ ಭಾರತೀಯ ಸಮುದಾಯದ ಶಕ್ತಿಯಾಗಿದೆ. ಈ ಮೌಲ್ಯಗಳು ಸಾವಿರಾರು ವರ್ಷಗಳಿಂದ ಭಾರತೀಯ ಸಮುದಾಯದವರಲ್ಲಿದೆ. ಪ್ರತಿ ಕ್ಷಣವೂ ಜೀವಂತಿಕೆಯಿಂದ ಇರುವಂತೆ ಮಾಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಡೆನ್ಮಾರ್ಕ್‌ನಲ್ಲಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಅವರು ಮಂಗಳವಾರ ಮಾತನಾಡಿದರು.
ಎಲ್ಲ ಭಾರತೀಯರೂ ದೇಶ ರಕ್ಷಣೆಯಲ್ಲಿ ಕೈಜೋಡಿಸುವುದಲ್ಲದೆ ರಾಷ್ಟ್ರ ಕಟ್ಟುವ ಕೆಲಸದಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಅವರು ಹೇಳಿದರು.
‘ಮೋದಿ, ಮೋದಿ, ‘ಮೋದಿ ಹೇ ತೋ ಮುಮ್ಕಿನ್ ಹೇ’ ಎಂಬ ಘೋಷಣೆಗಳ ನಡುವೆಯೇ ಪ್ರಧಾನಿ ಭಾಷಣ ಮಾಡಿದರು. ಇದೇ ವೇಳೆ, ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಸಹ ಹಾಜರಿದ್ದರು.
ಮೆಟ್ಟೆ ಫ್ರೆಡೆರಿಕ್‌ಸೆನ್ ಅವರು ಈ ಕಾರ್ಯಕ್ರಮಕ್ಕೆ ಬಂದಿರುವುದು ಭಾರತೀಯರ ಬಗ್ಗೆ ಅವರಿಗಿರುವ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿಯಾಗಿದೆ ಎಂದು ಮೋದಿ ಬಣ್ಣಿಸಿದರು.
‘ಹೂಡಿಕೆ ಮಾಡದವರು ಅವಕಾಶ ಕಳೆದುಕೊಳ್ಳುತ್ತಾರೆ’
ಭಾರತದಲ್ಲಿ ಹೂಡಿಕೆ ಮಾಡದವರು ಖಂಡಿತವಾಗಿಯೂ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ ಎಂದು ಮೋದಿ ಅಭಿಪ್ರಾಯಪಟ್ಟರು.
ಭಾರತ– ಡೆನ್ಮಾರ್ಕ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಸುಧಾರಣೆಗಳು ಹಸಿರು ತಂತ್ರಜ್ಞಾನ, ಹಡಗು ಮತ್ತು ಬಂದರುಗಳಂತಹ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಸೃಷ್ಟಿಸಿವೆ ಎಂದರು.
ಇದಕ್ಕೂ ಮುನ್ನಮೆಟ್ಟೆ ಫ್ರೆಡೆರಿಕ್‌ಸೆನ್ ಜತೆ ಮೋದಿದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ವರದಿಗಾರರನ್ನು ಉದ್ದೇಶಿಸಿ ಮಾತನಾಡಿ,ಉಕ್ರೇನ್‌ನಲ್ಲಿ ತಕ್ಷಣವೇ ಕದನವಿರಾಮ ಘೋಷಣೆಯಾಗಲಿ. ಬಿಕ್ಕಟ್ಟನ್ನು ನಿವಾರಿಸಲು ಉಕ್ರೇನ್ ಹಾಗೂ ರಷ್ಯಾ ರಾಜತಾಂತ್ರಿಕ ಮಾತುಕತೆಯ ಹಾದಿಗೆ ಮರಳಲಿ ಎಂದು ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.