ADVERTISEMENT

PHOTOS | 5ನೇ ಶತಮಾನದ ನಳಂದ ವಿ.ವಿ. ಕ್ಯಾಂಪಸ್‌ನಲ್ಲಿ ಮೋದಿ ಸುತ್ತಾಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2024, 9:34 IST
Last Updated 19 ಜೂನ್ 2024, 9:34 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದ ರಾಜ್‌ಗೀರ್‌ನಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದರು</p></div>

ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದ ರಾಜ್‌ಗೀರ್‌ನಲ್ಲಿ ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಉದ್ಘಾಟಿಸಿದರು

   

ಪಿಟಿಐ ಚಿತ್ರ

 5ನೇ ಶತಮಾನದಲ್ಲಿ ನಳಂದ ವಿವಿ ನಿರ್ಮಾಣಗೊಂಡಿತ್ತು. ಇದರ ಹೊಸ ಕ್ಯಾಂಪಸ್‌ ಅನ್ನು 2010 ರಲ್ಲಿ ನಳಂದ ವಿಶ್ವವಿದ್ಯಾನಿಲಯ ಕಾಯ್ದೆಯ ಮೂಲಕ ಸ್ಥಾಪಿಸಲಾಯಿತು

ADVERTISEMENT

ಉದ್ಘಾಟನೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪ್ರಾಚೀನ ನಳಂದ ಅವಶೇಷ ಪ್ರದೇಶಗಳಿಗೆ ಭೇಟಿ ನೀಡಿದರು

ಎಎಸ್‌ಐ ಪಾಟ್ನಾ ಸರ್ಕಲ್‌ನ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ಗೌತಮಿ ಭಟ್ಟಾಚಾರ್ಯ ಅವರು ಪ್ರಾಚೀನ ಅವಶೇಷಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು 

ವಿಶ್ವವಿದ್ಯಾಲಯವು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿದಂತೆ 17 ರಾಷ್ಟ್ರಗಳೊಂದಿಗೆ ಸಹಯೋಗ ಹೊಂದಿದೆ.

ಇಲ್ಲಿರುವ ಸ್ತೂಪಗಳು, ದೇವಾಲಯಗಳು, ವಸತಿ ಮತ್ತು ಶೈಕ್ಷಣಿಕ ಕಟ್ಟಡಗಳು, ಗಾರೆ, ಕಲ್ಲು ಮತ್ತು ಲೋಹದ ಪ್ರಮುಖ ಕಲಾಕೃತಿಗಳನ್ನು ವೀಕ್ಷಿಸಿದರು

ನಳಂದದ ಉತ್ಖನನದ ಅವಶೇಷಗಳಿರುವ ಜಾಗ ಪ್ರಾಚೀನ ಜಗತ್ತಿನ ಕಲಿಕೆಯ ಶ್ರೇಷ್ಠ ಸ್ಥಾನಗಳಲ್ಲಿ ಒಂದು ಎಂದಿದ್ದಾರೆ

ಈ ವಿಶ್ವ ವಿದ್ಯಾಲಯವು 12 ನೇ ಶತಮಾನದಲ್ಲಿ ಆಕ್ರಮಣಕಾರರಿಂದ ನಾಶವಾಗುವ ಮೊದಲು ಇದು 800 ವರ್ಷಗಳ ಕಾಲ ಪ್ರವರ್ಧಮಾನಕ್ಕೆ ಬಂದಿತು.

ನಳಂದ ವಿಶ್ವವಿದ್ಯಾಲಯ ಅವಶೇಷಗಳಿರುವ ಜಾಗಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವ ಸಂದರ್ಭ

ನಳಂದ ವಿಶ್ವವಿದ್ಯಾಲಯ ಉದ್ಘಾಟನೆಯ ಬಳಿಕ ಸಸಿ ನೆಟ್ಟು ನೀರೆರೆದರು

ನಳಂದ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್‌ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.