ನವದೆಹಲಿ: ಪ್ರಗತಿ ಮೈದಾನದ 'ಭಾರತ ಮಂಟಪ'ದಲ್ಲಿ ಏಳನೇ ಆವೃತ್ತಿಯ 'ಇಂಡಿಯಾ ಮೊಬೈಲ್ ಕಾಂಗ್ರೆಸ್' (ಐಎಂಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಶುಕ್ರವಾರ) ಉದ್ಘಾಟಿಸಿದರು.
ದೇಶದಾದ್ಯಂತದ ಆಯ್ದ ಶಿಕ್ಷಣ ಸಂಸ್ಥೆಗಳಿಗೆ 100 '5ಜಿ ಲ್ಯಾಬ್' ಗಳನ್ನು ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿತರಿಸಿದರು.
ಬಳಿಕ ಮಾತನಾಡಿದ ಅವರು, ತಂತ್ರಜ್ಞಾನದಲ್ಲಿನ ದೈನಂದಿನ ಬದಲಾವಣೆಗಳೊಂದಿಗಿನ ಭವಿಷ್ಯ ಇಲ್ಲಿದೆ. ದೇಶದಲ್ಲಿ ನಾವು 5ಜಿ ಸೇವೆ ವಿಸ್ತರಿಸುವುದು ಮಾತ್ರವಲ್ಲದೆ 6ಜಿ ತಂತ್ರಜ್ಞಾನದಲ್ಲೂ ಮುಂಚೂಣಿಯತ್ತ ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ಜಿಯೊ ಸ್ಪೇಸ್ ಫೈಬರ್...
ಈ ವೇಳೆ ಅಧಿಕ ವೇಗದ ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಒದಗಿಸಲು ಉಪಗ್ರಹ ಆಧಾರಿತ ಭಾರತದ ಮೊದಲ ಗಿಗಾ ಫೈಬರ್ ಸೌಕರ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ ಎಂದು ರಿಲಯನ್ಸ್ ಜಿಯೊ ಘೋಷಿಸಿದೆ.
ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಜಿಯೊ ಸ್ಪೇಸ್ ಫೈಬರ್ ಸೇವೆಯನ್ನು ಅನಾವರಣಗೊಳಿಸಲಾಯಿತು. ಜಿಯೊ ಪೆವಿಲಿಯನ್‌ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶೀಯ ತಂತ್ರಜ್ಞಾನವನ್ನು ಜಿಯೊ ಇನ್ಫೊಕಾಮ್ ಲಿಮಿಟೆಡ್‌ನ ಮುಖ್ಯಸ್ಥ ಆಕಾಶ್ ಅಂಬಾನಿ ವಿವರಿಸಿದರು.
ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆಯಾಗಿದ್ದು, ಇಂದಿನಿಂದ ಅಕ್ಟೋಬರ್ 29ರವರೆಗೆ ಆಯೋಜನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.