ನವದೆಹಲಿ: ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಶನಿವಾರ ಚಾಲನೆ ನೀಡಿದ್ದಾರೆ.
ಸೆಪ್ಟೆಂಬರ್ 12 ರಂದು ಸರಣಿ ಟ್ವೀಟ್ ಮಾಡಿದ ಮೋದಿ ಸ್ವಚ್ಛ ಭಾರತ್ ಅಭಿಯಾನಕ್ಕೆ ಕೈ ಜೋಡಿಸುವಂತೆ ಕರೆ ನೀಡಿದ್ದರು.
ಅಕ್ಟೋಬರ್ 2ರಂದು ನಾವು ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸಲಿದ್ದೇವೆ.ಅದೇ ದಿನ ಸ್ವಚ್ಛ ಭಾರತ್ ಅಭಿಯಾನಕ್ಕೆ 4 ವರ್ಷಗಳು ತುಂಬಲಿವೆ. ಸ್ವಚ್ಛ ಭಾರತಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಮೋದಿ ಟ್ವೀಟಿಸಿದ್ದರು.
ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ:ಕಾರ್ಯಕ್ರಮದ ಮುಖ್ಯಾಂಶಗಳು
ಪಟನಾದ ಮಿತಾಪುರ್‌ನಲ್ಲಿ ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
ಶಾಲಾ ಮಕ್ಕಳೊಂದಿಗೆ ಮೋದಿ ಸಂವಾದ
ದೆಹಲಿಯ ಪಹರ್‌ಗಂಜ್‍ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಹೈಯರ್ ಸೆಕೆಂಡರಿ ಶಾಲೆ ಮಕ್ಕಳೊಂದಿಗೆ ಮೋದಿ ಸಂವಾದ ನಡೆಸಿದರು
ದೆಹಲಿಯ ಪಹರ್‌ಗಂಜ್ ಶಾಲೆಯಲ್ಲಿ ಕಸ ಗುಡಿಸಿದ ಮೋದಿ
ಸ್ವಚ್ಛತಾ ಹೀ ಸೇವಾ ಅಭಿಯಾನದ ಅಂಗವಾಗಿ ನರೇಂದ್ರ ಮೋದಿ ದೆಹಲಿಯ ಪಹರ್‌ಗಂಜ್‍ನಲ್ಲಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಸ ಗುಡಿಸಿದ್ದಾರೆ.
ದೆಹಲಿಯ ವಸಂತ್ ವಿಹಾರ್‌ದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಧರ್ಮೇಂದ್ರ ಪ್ರಧಾನ್
ದೆಹಲಿಯ ವಸಂತ್ ವಿಹಾರ್ ಪ್ರದೇಶದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಫರಿದಾಬಾದ್‍ನಲ್ಲಿ ರಸ್ತೆ ಗುಡಿಸಿದ ಕೇಂದ್ರ ಸಚಿವ ರಾಜನಾಥ್ ಸಿಂಗ್
ಶೌಚಾಲಯ ನಿರ್ಮಿಸುವುದರಿಂದ ಮಾತ್ರ ದೇಶವನ್ನು ಸ್ವಚ್ಛವಾಗಿಡಲಾಗುವುದಿಲ್ಲ
ಶೌಚಾಲಯಗಳನ್ನು ನಿರ್ಮಿಸುವುದರಿಂದ ಮಾತ್ರ ದೇಶವನ್ನು ಸ್ವಚ್ಛವಾಗಿಡಲಾಗುವುದಿಲ್ಲ, ಸ್ವಚ್ಛತೆ ಎಂಬುದು ಹವ್ಯಾಸ, ಅದನ್ನು ಎಲ್ಲರೂ ಪ್ರತಿನಿತ್ಯ ಪಾಲಿಸಬೇಕು- ಮೋದಿ
ಮಾತಾ ಅಮೃತಾನಂದಮಯೀ ಜತೆ ಮೋದಿ ಸಂವಾದ
ನಮ್ಮ ಈ ಮಹತ್ತರ ಕಾರ್ಯವನ್ನು ಆಶೀರ್ವದಿಸಿದ ಮಾತಾ ಅಮೃತಾನಂದಮಯೀ ಅವರಿಗೆ ನಾನು ಕೃತಜ್ಞನಾಗಿದ್ದೇನೆ.ದೇಶದ ಬಡವರಿಗೆ ಮತ್ತು ನಿಸ್ಸಹಾಯಕ ವರ್ಗಕ್ಕೆ ನೀವು ಭರವಸೆಯ ಕಿರಣ ಆಗಿದ್ದೀರಿ .
ಸ್ವಚ್ಛತಾ ಅಭಿಯಾನದಲ್ಲಿ ರೈಲ್ವೆ ಇಲಾಖೆ ಉತ್ತಮ ಕೆಲಸ ಮಾಡಿದೆ.ರೇವಾರಿ ರೈಲ್ವೆ ನಿಲ್ದಾಣದಲ್ಲಿರುವ ಜನರು ಮೋದಿ ಜತೆ ಸಂವಾದ ನಡೆಸುತ್ತಿದ್ದು, ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ನಮ್ಮ ಮನೆಯನ್ನು ಮೊದಲು ಶುಚಿಯಾಗಿಡಬೇಕು: ಶ್ರೀ ಶ್ರೀ ರವಿ ಶಂಕರ್
ನಾವು ನಮ್ಮ ಮನೆಯನ್ನು ಮೊದಲು ಶುಚಿಯಾಗಿಡಬೇಕು, ಹಾಗಾದಕೆ ಮಾತ್ರ ನಾವು ಸಾರ್ವಜನಿಕ ಸ್ಥಳಗಳಲ್ಲಿಯೂ ಶುಚಿತ್ವ ಕಾಪಾಡಲು ಸಾಧ್ಯ- ಶ್ರೀ ಶ್ರೀ ರವಿಶಂಕರ್, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್
ಸ್ವಚ್ಛತಾ ಅಭಿಯಾನವು ಉತ್ತರ ಪ್ರದೇಶದ ಸ್ಥಿತಿಯನ್ನೇ ಬದಲಿಸಿದೆ: ಆದಿತ್ಯನಾಥ
ಉತ್ತರ ಪ್ರದೇಶದಲ್ಲಿ ಸ್ವಚ್ಛತೆ ಎಂಬುದು ದೂರದ ಮಾತಾಗಿತ್ತು, ಆದರೆ ನೀವು ಸ್ವಚ್ಛತೆ ಬಗ್ಗೆ ತೋರಿದ ಕಾಳಜಿ ಮತ್ತು ಉತ್ಸಾಹ ಇಲ್ಲಿನ ಸ್ಥಿತಿಯನ್ನೇ ಬದಲಿಸಿದೆ, ಮಾರ್ಚ್ 2017ರಿಂದ ಸ್ವಚ್ಛ ಭಾರತ ಅಭಿಯಾನವು ನಮ್ಮಲ್ಲಿ ಚುರುಕುಗೊಂಡಿತ್ತು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ
ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸಬೇಕು
ಸ್ವಚ್ಛತೆ ಅಭಿಯಾನದ ಜತೆಗೆ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸಬೇಕು ಎಂದು ಮೋದಿ ಹೇಳಿದ್ದಾರೆ.
ಸ್ವಚ್ಛ ಭಾರತ ಅಭಿಯಾನ ಯಾವುದೇ ಸರ್ಕಾರದ ಅಥವಾ ಪ್ರಧಾನಿಯ ಅಭಿಯಾನವಲ್ಲ. ಇದು ದೇಶದ ಅಭಿಯಾನ ಎಂದು ಸದ್ಗುರು ಹೇಳಿದ್ದಾರೆ.
ಐಟಿಬಿಪಿ ನೌಕರರಿಗೆ ಧನ್ಯವಾದ
ಐಟಿಬಿಪಿ ನೌಕರರೊಂದಿಗೆ ಸಂವಹನ ನಡೆಸಿದ ಮೋದಿ, ನೀವು ಗಡಿಯಲ್ಲಿಯೂ,ಪ್ರಕೃತಿ ದುರಂತ ಸಂಭವಿಸಿದಾಗಲೂ ನಮ್ಮ ರಕ್ಷಣೆಗೆ ನೀವು ಬಂದೀದ್ದೀರಿ, ನೀವು ಈ ಅಭಿಯಾನಕ್ಕೆ ಕೈ ಜೋಡಿಸುವ ಮೂಲಕ ದೇಶ ನಿರ್ಮಾಣಕ್ಕೆ ನೆರವಾಗಿದ್ದೀರಿ.
ಸ್ವಚ್ಛ ಭಾರತ ಅಭಿಯಾನಕ್ಕೆ ಟಾಟಾ ಬೆಂಬಲ
ದಿ ಟಾಟಾ ಟ್ರಸ್ಟ್ ಸ್ವಚ್ಛ ಭಾರತ ಅಭಿಯಾನಕ್ಕೆ ಸಕ್ರಿಯ ಬೆಂಬಲ ನೀಡುತ್ತಿದ್ದು, ಮುಂದೆಯೂ ಬೆಂಬಲ ನೀಡಲಿದೆ ಎಂದು ರತನ್ ಟಾಟಾ ಹೇಳಿದ್ದಾರೆ.
ಸ್ವಚ್ಛತೆ ಬಗ್ಗೆ ಸಂದೇಶ ಹಬ್ಬಿಸಲು ಟಿವಿ ಉತ್ತಮ ಮಾಧ್ಯಮ
ನರೇಂದ್ರ ಮೋದಿ ಜತೆ ಸಂವಾದ ನಡೆಸಿದ ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಟಿವಿ ಪರಿಣಾಮಕಾರಿ ಮಾಧ್ಯಮ ಎಂದು ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಮೋದಿ ಸ್ವಚ್ಛ ಭಾರತ್ ಅಭಿಯಾನ್ ಆರಂಭಿಸಿದ್ದರು.ಭಾರತದ ಓರ್ವ ಪ್ರಜೆಯಾಗಿ ನಾನೂ ಅದರಲ್ಲಿ ಭಾಗಿಯಾಗಿದ್ದೆ. ವಿವಿಧ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರ ಜತೆಗೆಗೆ ಮುಂಬೈಯ ವೆರ್ಸೋವಾ ಕಡಲ ತೀರ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೆ ಎಂದು ಬಚ್ಚನ್ ಹೇಳಿದ್ದಾರೆ.
ಎಲ್ಲ ವಿಭಾಗದ ಜನರೂ ಈ ಅಭಿಯಾನದಲ್ಲಿ ಭಾಗಿಯಾಗಿದ್ದರು : ಮೋದಿ
ಇವತ್ತಿನಿಂದ ಗಾಂಧೀ ಜಯಂತಿವರೆಗೆ ಸ್ವಚ್ಛ ಭಾರತ ಅಭಿಯಾನದಲ್ಲಿ ದೇಶದ ಜನರು ಕೈಜೋಡಿಸಬೇಕಿದೆ. ಬಾಪೂ ಅವರ ಕನಸನ್ನು ಸಾಕಾರಗೊಳಿಸಲು ನಾಲ್ಕು ವರ್ಷಗಳ ಹಿಂದೆ ಈ ಅಭಿಯಾನವನ್ನು ಆರಂಭಿಸಲಾಗಿತ್ತು.ಎಲ್ಲ ವಿಭಾಗದ ಜನರು ಸಹಕಾರ ನೀಡಿದ್ದರಿಂದ ನಾವು ಇವತ್ತು ಈ ಹಂತಕ್ಕೆ ಬಂದು ನಿಂತಿದ್ದೇವೆ.
ಸಾಮಾಜಿಕ ಬದಲಾವಣೆಗೆ ಯುವಕರೇ ರಾಯಭಾರಿಗಳು
ಸಾಮಾಜಿಕ ಬದಲಾವಣೆಗೆ ಯುವಕರೇ ರಾಯಭಾರಿಗಳು ಎಂದು ಮೋದಿ ಹೇಳಿದ್ದಾರೆ.ಯುವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡು ಉತ್ತಮ ಕೆಲಸ ಮಾಡಿದ್ದಾರೆ. ದೇಶದಲ್ಲಿನ ಧನಾತ್ಮಕ ಬದಲಾವಣೆಗೆ ಯುವಕರು ಮುಂದಿನ ಸಾಲಿನಲ್ಲಿ ನಿಂತಿದ್ದಾರೆ.
ಸ್ವಚ್ಛ ಭಾರತ ಅಭಿಯಾನದಲ್ಲಿ ನಾರೀಶಕ್ತಿಯ ಕೊಡುಗೆ ಅಪಾರ - ಮೋದಿ
ಸ್ವಚ್ಛ ಭಾರತದ ಬಗ್ಗೆ ಮಹಾತ್ಮ ಗಾಂಧಿ ಕನಸು ನನಸಾಗಿಸಲು ಸ್ವಚ್ಚತಾ ಹೀ ಸೇವಾ ಅಭಿಯಾನ ಆರಂಭಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.