ಭುವನೇಶ್ವರ್: ಪಾಕಿಸ್ತಾನದ ಬಾಲಾಕೋಟ್‌ನಲ್ಲಿಉಗ್ರ ಶಿಬಿರಗಳ ಮೇಲೆ ಭಾರತೀಯ ವಾಯುದಳ ನಡೆಸಿರುವ ವಾಯುದಾಳಿ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ಪಾಕಿಸ್ತಾನ ಇನ್ನೂ ಮೃತದೇಹಗಳನ್ನು ಎಣಿಸುತ್ತಿದೆ ಆದರೆ ಇಲ್ಲಿ ವಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ' ಎಂದು ಹೇಳಿದ್ದಾರೆ.
ಒಡಿಶಾದ ಕೋರಾಪುಟ್‍ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಬಾಲಾಕೋಟ್ ದಾಳಿ ನಡೆದು ಒಂದು ತಿಂಗಳಾಗಿದೆ.ಭಯೋತ್ಪಾದನೆ ವಿರುದ್ಧ ಭಾರತ ಕ್ರಮ ಕೈಗೊಳ್ಳುವಾಗ ಅವರ ಮನೆಗೆ ನುಗ್ಗಿ ನಾವು ಉಗ್ರರನ್ನು ನಾಶ ಮಾಡುತ್ತೇವೆ. ಆದರೆ ಇಲ್ಲಿರುವ ಕೆಲವರು ಸಾಕ್ಷ್ಯ ಕೇಳುತ್ತಿದ್ದಾರೆ.
ಮಿಷನ್ ಶಕ್ತಿಬಗ್ಗೆ ಮಾತನಾಡಿದ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಬುಧವಾರ ಬಾಹ್ಯಾಕಾಶದಲ್ಲಿ ಉಪಗ್ರಹವೊಂದನ್ನು ಹೊಡೆದುರುಳಿಸಿತ್ತು. ಈ ಮೂಲಕ ಈ ರೀತಿಸಾಮರ್ಥ್ಯ ಹೊಂದಿರುವ ಅಮೆರಿಕ, ರಷ್ಯಾ ಮತ್ತು ಚೀನಾ ಮೊದಲಾದ ರಾಷ್ಟ್ರಗಳ ಸಾಲಿಗೆ ಭಾರತವೂ ಸೇರ್ಪಡೆಯಾಗಿದೆ. ನಾವೀಗ ಬಾಹ್ಯಾಕಾಶದಲ್ಲಿಯೂ ಚೌಕೀದಾರ್ ಆಗಿದ್ದೇವೆ ಎಂದಿದ್ದಾರೆ ಮೋದಿ.
ನಮ್ಮ ವಿಜ್ಞಾನಿಗಳನ್ನು ಮತ್ತು ಸಶಸ್ತ್ರ ಪಡೆಯನ್ನು ಅವಮಾನಿಸುವ ಜನರಿಗೆ ತಕ್ಕುದಾದ ಉತ್ತರ ನೀಡುವ ಸಮಯಬಂದಿದೆ ಎಂದು ಹೇಳಿದ ಮೋದಿ, ದುರ್ಬಲ ಸರ್ಕಾರವೊಂದನ್ನು ರಚಿಸುವುದಕ್ಕಾಗಿಯೇ ವಿಪಕ್ಷಗಳ ಬಿಜೆಪಿ ವಿರುದ್ಧ ಹೋರಾಡುತ್ತಿವೆ. ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವ ದ ಬಿಜೆಡಿ ಸರ್ಕಾರವು ಈ ರಾಜ್ಯವನ್ನು ದಶಕಗಳ ಕಾಲ ಹಿಂದುಳಿದಿರುವಂತೆ ಮಾಡಿದೆ.
ಕಾಂಗ್ರೆಸ್ ಮತ್ತು ಬಿಜೆಡಿಗೆ ತಕ್ಕ ಶಿಕ್ಷೆ ನೀಡುವ ಸಮಯ ಸನ್ನಿಹಿತವಾಗಿದೆ. ಒಡಿಶಾದಲ್ಲಿ ಅಭಿವೃದ್ಧಿ ಕಾರ್ಯ ಮಾಡಲು ಅವರು ವಿಫಲವಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಏಪ್ರಿಲ್ 11 ರಿಂದ ಮೇ 19ರ ವರೆಗೆ ಏಳು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಒಡಿಶಾದಲ್ಲಿ ಮೊದಲ ಹಂತದಲ್ಲಿ ಅಂದರೆಏಪ್ರಿಲ್ 11 ರಂದು ಚುನಾವಣೆ ನಡೆಯಲಿದೆ . 147 ವಿಧಾನಸಭಾ ಸೀಟು ಹೊಂದಿರುವ ಒಡಿಶಾದಲ್ಲಿ 21 ಲೋಕಸಭಾ ಸೀಟುಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.