ADVERTISEMENT

ಒಂದು ಶ್ರೇಣಿ, ಒಂದು ಪಿಂಚಣಿ ಐತಿಹಾಸಿಕ ಯೋಜನೆ: ಪ್ರಧಾನಿ ನರೇಂದ್ರ ಮೋದಿ ಬಣ್ಣನೆ

ಯೋಜನೆ ಅನುಷ್ಠಾನಗೊಳಿಸಿ ಐದು ವರ್ಷಗಳು ಪೂರ್ಣ

ಪಿಟಿಐ
Published 7 ನವೆಂಬರ್ 2020, 7:48 IST
Last Updated 7 ನವೆಂಬರ್ 2020, 7:48 IST
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ‘ಒನ್‌ ರ‍್ಯಾಂಕ್ ಒನ್ ಪೆನ್ಷನ್‌‘ ಯೋಜನೆಯ ನಿರ್ಧಾರಗಳು - ಚಿತ್ರ: ಪ್ರಧಾನಿಯವರ ಟ್ವಿಟರ್‌ ಖಾತೆಯಿಂದ
ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ‘ಒನ್‌ ರ‍್ಯಾಂಕ್ ಒನ್ ಪೆನ್ಷನ್‌‘ ಯೋಜನೆಯ ನಿರ್ಧಾರಗಳು - ಚಿತ್ರ: ಪ್ರಧಾನಿಯವರ ಟ್ವಿಟರ್‌ ಖಾತೆಯಿಂದ   

ನವದೆಹಲಿ: ಮಾಜಿ ಯೋಧರ ಯೋಗಕ್ಷೇಮದ ಖಾತರಿಗಾಗಿ ಜಾರಿಗೆ ತಂದ ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್‌ಒಪಿ) ಯೋಜನೆ ಒಂದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

‘ಒಆರ್‌ಒಪಿ‘ ಯೋಜನೆ ಅನುಷ್ಠಾನಗೊಳಿಸಿ ಐದು ವರ್ಷಗಳು ಪೂರೈಸಿದ್ದರಿಂದ ಯೋಧರನ್ನು ಅಭಿನಂದಿಸಿದ ಅವರು ‘ನಿವೃತ್ತಿಯ ನಂತರ ಎಲ್ಲ ಯೋಧರಿಗೂ ಸಮಾನ ಪಿಂಚಣಿ ದೊರೆಯಬೇಕು ಎಂಬ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಯಿತು‘ ಎಂದು ಹೇಳಿದ್ದಾರೆ.

‘ನಮ್ಮ ದೇಶವನ್ನು ರಕ್ಷಿಸುತ್ತಿರುವ ಯೋಧರ ಕ್ಷೇಮಕ್ಕಾಗಿ ಜಾರಿಗೊಳಿಸಿದ ‘ಒಂದು ಶ್ರೇಣಿ, ಒಂದು ಪಿಂಚಣಿ’ ಯಂತಹ ಐತಿಹಾಸಿಕ ಯೋಜನೆಗೆ ಐದು ವರ್ಷಗಳು ತುಂಬಿವೆ. ಇಂಥ ಯೋಜನೆ ಜಾರಿಗಾಗಿ ಭಾರತ ದಶಕಗಳ ಕಾಲ ಕಾಯಬೇಕಾಯಿತು. ಯೋಧರು ಸಲ್ಲಿಸುತ್ತಿರುವ ಅಪ್ರತಿಮ ಸೇವೆಗಾಗಿ ಅವರಿಗೆ ನಾನು ನಮಿಸುತ್ತೇನೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಇದೇ ವೇಳೆ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ಮುಖ್ಯಾಂಶಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಸರ್ಕಾರದ ಮಾಹಿತಿಯ ಪ್ರಕಾರ, 20.60 ಲಕ್ಷ ಮಾಜಿ ಸೈನಿಕರು ಮತ್ತು ಅವರ ಕುಟುಂಬ ಪಿಂಚಣಿದಾರರಿಗೆ ₹10,795.4 ಕೋಟಿ ವಿತರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.