ನವದೆಹಲಿ: ಮೂರೇ ತಿಂಗಳಲ್ಲಿ ಕನ್ನಡ ಕಲಿತ ಕರ್ನಾಟಕದ ಕಲ್ಪನಾ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಕಾಶವಾಣಿಯಲ್ಲಿ ಪ್ರಸಾರವಾದ ತಿಂಗಳ ‘ಮನ್ ಕಿ ಬಾತ್’ನಲ್ಲಿ ಮಾತನಾಡುತ್ತಿರುವಾಗ ಅವರು ಭಾಷಾ ವೈವಿಧ್ಯದ ಬಗ್ಗೆ ವಿವರಿಸಿದ್ದಾರೆ. ಇದೇ ವೇಳೆ, 10ನೇ ತರಗತಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಉತ್ತಮ ಅಂಕ ಗಳಿಸಿದ ಕರ್ನಾಟಕದ ಕಲ್ಪನಾ ಎಂಬ ವಿದ್ಯಾರ್ಥಿನಿ ಬಗ್ಗೆ ಪ್ರಸ್ತಾಪಿಸಿದರು.
‘ಕಲ್ಪನಾಳ ವಿಶೇಷ ಎಂದರೆ, ಇತ್ತೀಚಿನವರೆಗೂ ಆಕೆಗೆ ಕನ್ನಡವೇ ಗೊತ್ತಿರಲಿಲ್ಲ. ಆದರೆ, ಮೂರೇ ತಿಂಗಳಲ್ಲಿ ಆಕೆ ಕನ್ನಡ ಕಲಿತಿದ್ದಲ್ಲದೇ, ಪರೀಕ್ಷೆಯಲ್ಲಿ 92 ಅಂಕ ಗಳಿಸಿ ಗಮನ ಸೆಳೆದಿದ್ದಾಳೆ’ ಎಂದು ಮೋದಿ ಶ್ಲಾಘಿಸಿದರು.
‘ಕೋವಿಡ್ ಪಿಡುಗಿನ ಸಂದರ್ಭದಲ್ಲಿ ಕೂಡ ದೇಶದ ಸ್ಟಾರ್ಟ್‌ಅಪ್‌ಗಳುಸಂಪತ್ತು ಸೃಷ್ಟಿಸುವ ಜೊತೆಗೆ ತಮ್ಮ ಮೌಲ್ಯವನ್ನು ಸಹ ಹೆಚ್ಚಿಸಿಕೊಂಡಿವೆ’ ಎಂದೂ ಮೋದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.