ADVERTISEMENT

ಪ್ರಧಾನಿಯದ್ದು ಭ್ರಷ್ಟಾಚಾರದ ಶಾಲೆ, ಎಂಟಾಯರ್‌ ಕರಪ್ಷನ್ ಸೈನ್ಸ್ ‍ಪಠ್ಯ: ರಾಹುಲ್

ಪಿಟಿಐ
Published 20 ಏಪ್ರಿಲ್ 2024, 6:52 IST
Last Updated 20 ಏಪ್ರಿಲ್ 2024, 6:52 IST
<div class="paragraphs"><p>ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ </p></div>

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಪ್ರಧಾನಿ ಮೋದಿ ದೇಶದಲ್ಲಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ಎಂಟಾಯರ್‌ ಕರಪ್ಷನ್ ಸೈನ್ಸ್‌ನ ಪಾಠಗಳನ್ನು ಬೋಧಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಎಕ್ಸ್‌ನಲ್ಲಿ ಕಾಂಗ್ರೆಸ್‌ನ ಹೊಸ ಪ್ರಚಾರದ ವಿಡಿಯೊ ಹಂಚಿಕೊಂಡು ಪ್ರಧಾನಿ ಮೋದಿಯವರನ್ನು ಲೇವಡಿ ಮಾಡಿದ್ದಾರೆ.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಭ್ರಷ್ಟಾಚಾರದ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಡೊನೇಶನ್ ಬ್ಯುಸಿನೆಸ್ ಎನ್ನುವ ಪಠ್ಯ ಸೇರಿ ಎಂಟಾಯರ್‌ ಕರಪ್ಷನ್‌ ಸೈನ್ಸ್ ವಿಷಯವನ್ನು ವಿಸ್ತೃತವಾಗಿ ಬೋಧಿಸುತ್ತಾರೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ದಾಳಿ ಮಾಡಿ ದೇಣಿಗೆಗಳನ್ನು ಸಂಗ್ರಹಿಸುವುದು ಹೇಗೆ? ದೇಣಿಗೆ ಪಡೆದ ಬಳಿಕ ಗುತ್ತಿಗೆ ಕೊಡುವುದು ಹೇಗೆ ಎನ್ನುವುದರ ಬಗ್ಗೆ ಪ್ರಧಾನಿ ಪಾಠ ಮಾಡುತ್ತಾರೆ ಎಂದು ರಾಹುಲ್ ಹೇಳಿದ್ದಾರೆ.

ಭ್ರಷ್ಟ ಕೆಲಸಗಳನ್ನು ವಾಷಿಂಗ್ ಮಶಿನ್‌ ಹೇಗೆ ತೊಳೆಯುತ್ತದೆ. ಏಜೆನ್ಸಿಗಳನ್ನು ವಶಪಡಿಸುವ ಏಜೆಂಟ್‌ಗಳಾಗಿ ಪರಿವರ್ತಿಸುವ ಮೂಲಕ ಬೇಲ್ ಮತ್ತು ಜೈಲ್ ಆಟಗಳನ್ನು ಹೇಗೆ ಆಡಿಸಲಾಗುತ್ತದೆ ಎನ್ನುವುರದ ಬಗ್ಗೆ ಪಾಠ ಮಾಡುತ್ತಾರೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.