ADVERTISEMENT

ಪ್ರಧಾನಿ ಮೋದಿ ಪೊಲೆಂಡ್ ಪ್ರವಾಸ: ರಾಜತಾಂತ್ರಿಕ ಸಂಬಂಧಗಳಿಗೆ ಒತ್ತು

ಪಿಟಿಐ
Published 21 ಆಗಸ್ಟ್ 2024, 4:06 IST
Last Updated 21 ಆಗಸ್ಟ್ 2024, 4:06 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ&nbsp;</p></div>

ಪ್ರಧಾನಿ ನರೇಂದ್ರ ಮೋದಿ 

   

ವಾಸಾ : ಎರಡು ದಿನಗಳ ಭೇಟಿಗಾಗಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ವಾಸಾ ತಲುಪಿದ್ದು, ಇದು 45 ವರ್ಷಗಳ ನಂತರ ಈ ದೇಶಕ್ಕೆ ಭಾರತದ ಪ್ರಧಾನಿಯ ಮೊದಲ ಅಧಿಕೃತ ಭೇಟಿಯಾಗಿದೆ.

ಪೋಲೆಂಡ್‌ ರಾಜಧಾನಿಯಲ್ಲಿರುವ ಭಾರತೀಯರು ಮೋದಿ ಅವರ ಭೇಟಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಇಲ್ಲಿನ ಜನರಲ್ಲಿ ವಿಶೇಷವಾಗಿ ಯುವಜನರು, ವಿದ್ಯಾರ್ಥಿಗಳಲ್ಲಿ ಪ್ರಧಾನಿ ಭೇಟಿಯಿಂದ ಸಂತಸ ಮೂಡಿದೆ. ಇಲ್ಲಿ ಭಾರತೀಯರ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿದ್ದು, ಅದರಲ್ಲಿ ವಿದ್ಯಾರ್ಥಿಗಳೇ ಹೆಚ್ಚಾಗಿದ್ದಾರೆ’ ಎಂದು ಪೋಲೆಂಡ್‌ನ ಭಾರತೀಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಗೌರವ್ ಸಿಂಗ್ ಹೇಳಿದರು.

ಈ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಆರ್ಥಿಕ ಮತ್ತು ಇತರ ಸಾಧ್ಯತೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ ಎಂದು ಪೋಲೆಂಡ್‌ನಲ್ಲಿನ ಭಾರತದ ರಾಯಭಾರಿ ನಗ್ಮಾ ಮೊಹಮ್ಮದ್ ಮಲ್ಲಿಕ್ ಅವರು ತಿಳಿಸಿದ್ದಾರೆ.

ಅಧ್ಯಕ್ಷ ಆಂಡ್ರೆ ಸೆಬಾಸ್ಟಿಯನ್ ಡೂಡಾ ಹಾಗೂ ಪ್ರಧಾನಿ ಡೊನಾಲ್ಡ್‌ ಟಸ್ಕ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಭಾರತೀಯ ದೋಸೆ ಬಟರ್ ಚಿಕನ್ ಅಗ್ರ ಖಾದ್ಯ  ಭಾರತೀಯ ಪಾಕಪದ್ಧತಿಯು ಪೋಲೆಂಡ್‌ನಲ್ಲಿ ಹೆಚ್ಚು ಜನಪ್ರಿಯವಾಗಿದೆ. ವಿವಿಧ ಭಾರತೀಯ ರೆಸ್ಟೋರೆಂಟ್‌ಗಳು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುತ್ತಿದ್ದು ದೋಸೆ ಬಟರ್ ಚಿಕನ್‌ ತರಹದ ಆಹಾರಗಳು ಪೋಲೆಂಡ್‌ನಲ್ಲಿನ ಕೂಡ ಅನೇಕರ ಜಿಹ್ವಾಚಾಪಲ್ಯ ತಣಿಸುತ್ತಿವೆ. ಪೋಲೆಂಡ್‌ನಾದ್ಯಂತ 45ಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿದ್ದು ಅವು ಭಾರತದ ವಿವಿಧ ಸಾಂಪ್ರದಾಯಿಕ  ಆಹಾರ ನೀಡುತ್ತಿವೆ. ಪೋಲೆಂಡ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಪಟ್ಟಿಯ ಪ್ರಕಾರ ರಾಜಧಾನಿ ವಾಸಾವೊಂದರಲ್ಲೇ 12ಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.