ಲಖನೌ: ನರೇಂದ್ರ ಮೋದಿಯವರ ಭಾಷಣದಲ್ಲಿ ತಪ್ಪುಗಳು ನುಸುಳುವುದು ಇದೇ ಮೊದಲೇನೂ ಅಲ್ಲ. ಗುರುವಾರ ಉತ್ತರ ಪ್ರದೇಶದ ಮಗಹರ್‍ನಲ್ಲಿ ಸಂತ ಕಬೀರ ದಾಸರ 500ನೇ ಪುಣ್ಯಸ್ಮರಣೆ ಅಂಗವಾಗಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಮೋದಿ, ಕಬೀರ ದಾಸರ ಬದುಕಿದ್ದ ಕಾಲಘಟ್ಟದ ಬಗ್ಗೆ ಹೇಳುವಾಗ ಎಡವಟ್ಟು ಮಾಡಿಕೊಂಡಿದ್ದಾರೆ.
ಮಹಾತ್ಮ ಕವಿ ಕಬೀರ ದಾಸರ ಸಮಾಧಿಗೆ ನಾನು ಮತ್ತೊಮ್ಮೆ ಕೋಟಿ ಕೋಟಿ ನಮನ ಮಾಡುತ್ತಿದ್ದೇನೆ,.ಇಲ್ಲಿಯೇ ಸಂತ ಕಬೀರ, ಗುರುನಾನಕ್ ದೇವ ಮತ್ತು ಬಾಬಾ ಗೋರಖನಾಥ ಅವರು ಜತೆಯಾಗಿ ಕುಳಿತು ಆಧ್ಯಾತ್ಮಿಕ ಚರ್ಚೆ ಮಾಡುತ್ತಿದ್ದರು. ಮಗಹರ್‍ಗೆ ಬಂದು ನಾನು ಧನ್ಯನಾಗಿದ್ದೇನೆ ಎಂದಿದ್ದರು.
ಆದರೆ ಬಾಬಾ ಗೋರಖನಾಥರು ಕಬೀರ ಮತ್ತು ಗುರುನಾನಕ್ ಬದುಕಿದ್ದ ಕಾಲಘಟ್ಟದಲ್ಲಿ ಇರಲಿಲ್ಲ ಎಂದು ಇತಿಹಾಸಕಾರರು ವಾದಿಸುತ್ತಿದ್ದಾರೆ.ಬಾಬಾ ಗೋರಖನಾಥರು 11ನೇ ಶತಮಾನದಲ್ಲಿ ಬದುಕಿದ್ದರು. ಆದರೆ ಕಬೀರ ದಾಸರು ಬದುಕಿದ್ದದ್ದು 15ನೇ ಶತಮಾನದಲ್ಲಿ. ಹಾಗಾದರೆ ಅವರಿಬ್ಬರು ಜತೆಯಾಗಿ ಕುಳಿತು ಆಧ್ಯಾತ್ಮದ ಬಗ್ಗೆ ಚರ್ಚಿಸಿದ್ದು ಹೇಗೆ ಎಂದು ಇತಿಹಾಸಕಾರರು ಚಿಂತಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.