ADVERTISEMENT

ಏಕತಾ ಪ್ರತಿಮೆಗೆ ರೈಲ್ವೆ ಸಂಪರ್ಕ: ಎಂಟು ರೈಲಿಗೆ ಇಂದು ಮೋದಿ ಚಾಲನೆ

ಪಿಟಿಐ
Published 17 ಜನವರಿ 2021, 5:58 IST
Last Updated 17 ಜನವರಿ 2021, 5:58 IST
ವಿಸ್ಟಾಡೋಮ್‌ ಬೋಗಿ
ವಿಸ್ಟಾಡೋಮ್‌ ಬೋಗಿ   

ನವದೆಹಲಿ: ದೇಶದ ವಿವಿಧ ಭಾಗಗಳಿಂದ ಏಕತಾ ಪ್ರತಿಮೆ ಇರುವ ಗುಜರಾತ್‌ನ ಕೆವಡಿಯಾಗೆ ಸಂಚರಿಸುವ ಎಂಟು ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಚಾಲನೆ ನೀಡಲಿದ್ದಾರೆ.

ಕೆವಡಿಯಾ ರೈಲು ನಿಲ್ದಾಣವು ಹಸಿರು ಕಟ್ಟಡ ಪ್ರಮಾಣ ಪತ್ರ ಪಡೆದ ದೇಶದ ಮೊದಲ ರೈಲು ನಿಲ್ದಾಣವಾಗಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಿಸಿರುವ ಈ ಪ್ರತಿಮೆಯನ್ನು ನೋಡಲು ಇದೀಗ ದೇಶದ ವಿವಿಧ ಭಾಗಗಳಿಂದ ರೈಲ್ವೆ ಸಂಪರ್ಕ ದೊರೆಯಲಿದೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಈ ಪೈಕಿ ಒಂದು ರೈಲು ಜನ ಶತಾಬ್ಧಿ ಎಕ್ಸ್‌ಪ್ರೆಸ್‌ ಆಗಿದ್ದು, ಇದು ಅಹಮದಾಬಾದ್‌ನಿಂದ ಕೆವಡಿಯಾಗೆ ಸಂಚರಿಸದೆ. ಈ ರೈಲಿನಲ್ಲಿ ಅತ್ಯಾಧುನಿಕ ವಿಸ್ಟಾಡೋಮ್‌ ಬೋಗಿಗಳು ಇರಲಿವೆ ಎಂದು ಹೇಳಿರುವ ಅವರು, ಕೆಲ ಚಿತ್ರಗಳನ್ನು ಪೋಸ್ಟ್‌ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.