ADVERTISEMENT

ಪ್ರಧಾನಿ ಟೀ ಮಾರುತ್ತಿದ್ದರು, ಬಿಜೆಪಿಗೆ ಟೀ ಅಂದ್ರೆ ಆಗಲ್ಲ: ಉದ್ಧವ್‌ ವ್ಯಂಗ್ಯ

ಮಹಾರಾಷ್ಟ್ರ ವಿಧಾನಸಭೆ ಅಧಿವೇಶನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2019, 2:44 IST
Last Updated 16 ಡಿಸೆಂಬರ್ 2019, 2:44 IST
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ   

ನಾಗಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯ‘ನಾನೂ ಟೀ ಮಾರುತ್ತಿದ್ದೆ’ ಹೇಳಿಕೆಯನ್ನುಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಿಜೆಪಿ ಮಹಾರಾಷ್ಟ್ರ ಘಟಕವನ್ನು ವ್ಯಂಗ್ಯ ಮಾಡಲು ಬಳಸಿಕೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸರ್ಕಾರ ಆಯೋಜಿಸುವ ಸಾಂಪ್ರದಾಯಿಕ ಔತಣಕೂಟಕ್ಕೆ (ಟೀ ಪಾರ್ಟಿ) ಬಿಜೆಪಿ ನಾಯಕರು ಗೈರುಹಾಜರಾಗಿದ್ದು ಉದ್ಧವ್ ಅವರನ್ನು ಕೆರಳಿಸಿದೆ.

‘ಹಿಂದುತ್ವದ ಪ್ರತಿಪಾದಕ ವೀರ್ ಸಾವರ್ಕರ್ ಅವರನ್ನುಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಮಾನಗೊಳಿಸಿದ್ದಾರೆ. ಅಂಥವರ ಜೊತೆಗೆ ಶಿವಸೇನಾ ಕೈಜೋಡಿಸಿದೆ’ ಎಂದು ದೂರಿದ್ದ ಬಿಜೆಪಿ ವಿವಿಧ ಕಾರಣಗಳನ್ನು ಮುಂದಿಟ್ಟು ಔತಣಕೂಟದಿಂದ ದೂರ ಉಳಿದಿತ್ತು.

ADVERTISEMENT

‘ನಮ್ಮ ಪ್ರಧಾನಿಯ ಹಿನ್ನೆಲೆ ನಮಗೆ ಗೊತ್ತು. ಅವರು ಒಂದು ಕಾಲಕ್ಕೆ ಟೀ ಮಾರುತ್ತಿದ್ದರು. ಆದರೆ ನನಗೆ ನಮ್ಮ ರಾಜ್ಯದ ಬಿಜೆಪಿ ನಾಯಕರು ಟೀ ಕುಡಿಯಲು ಯಾಕೆ ಬರಲಿಲ್ಲವೋ ಅರ್ಥವಾಗಲಿಲ್ಲ. ಬಹುಶಃ ಪ್ರಧಾನಿಯೊಂದಿಗೆ ಮಹಾರಾಷ್ಟ್ರ ಬಿಜೆಪಿ ಘಟಕದ ನಾಯಕರಿಗೆ ಭಿನ್ನಾಭಿಪ್ರಾಯ ಇರಬಹುದು’ ಎಂದು ಠಾಕ್ರೆ ಲೇವಡಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.