ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕ್‌ನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ ಜೋಯ್ ಥಾಮಸ್ ಅವರನ್ನು ₹6,500 ಕೋಟಿ ವಂಚನೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಮುಂಬೈಯಲ್ಲಿನ ಆರ್ಥಿಕ ಅಪರಾಧ ದಳಹೇಳಿದೆ.
ಪಿಎಂಸಿ ಮಂಡಳಿಯ ಮಾಜಿ ಸದಸ್ಯ ಮತ್ತು ಎಚ್‌ಡಿಐಎಲ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.
ಮುಂಬೈ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಎಚ್‌ಡಿಐಎಲ್‌ನ ಪ್ರವರ್ತಕರು ಮತ್ತು ಬ್ಯಾಂಕ್‌ನ ಮಾಜಿ ಅಧ್ಯಕ್ಷರಿಗೆ ಸಂಪರ್ಕವಿರುವ 6 ಸ್ಥಳಗಳಲ್ಲಿಜಾರಿ ನಿರ್ದೇಶನಾಲಯ ಶುಕ್ರವಾರಶೋಧ ನಡೆಸಿತ್ತು.
ಎಚ್‌ಡಿಐಎಲ್‌ನ ಹಿರಿಯ ಕಾರ್ಯ ನಿರ್ವಾಹಕರಾದ ರಾಕೇಶ್ ವಧವಾನ್ ಮತ್ತು ಸಾರಂಗ್ ವಧವಾನ್ ಅವರನ್ನು ಪೊಲೀಸರು ಅಕ್ಟೋಬರ್ 9ರ ವರೆಗೆ ಬಂಧನದಲ್ಲಿರಿಸಿದ್ದಾರೆ.
ದಿವಾಳಿಯಾಗಿರುವ ಎಚ್‌ಡಿಐಎಲ್‌ಗೆ ಪಿಎಂಸಿ ಬ್ಯಾಂಕ್ ತಮ್ಮ ಶೇ. 75 ರಷ್ಟು ಸಾಲವನ್ನು ನೀಡಿತ್ತು. ಎಚ್‌ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ 21,000 ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿದೆ.
ರಿಯಲ್ ಎಸ್ಟೇಟ್ ಸಂಸ್ಠೆಯಾದ ಎಚ್‌ಡಿಐಎಲ್‌ಗೆ ಸಾಲ ನೀಡಿದ್ದರೂ ವಾರ್ಷಿಕ ವರದಿಯಲ್ಲಿ ಪಿಎಂಸಿ ಈ ಬಗ್ಗೆ ಉಲ್ಲೇಖಿಸಿರಲಿಲ್ಲ. ಎಚ್‌ಡಿಐಎಲ್ ದಿವಾಳಿಯಾಗುತ್ತಿದ್ದರೂ ಪಿಎಂಸಿ ಬ್ಯಾಂಕ್ ಸಾಲ ಕೊಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.