ADVERTISEMENT

ಸಿಂಗಪುರ: ನೀರವ್‌ ಮೋದಿ ಸೋದರಿಯ ಬ್ಯಾಂಕ್‌ ಖಾತೆ ಸ್ಥಗಿತ

ಪಿಟಿಐ
Published 2 ಜುಲೈ 2019, 20:15 IST
Last Updated 2 ಜುಲೈ 2019, 20:15 IST
ನೀರವ್‌ ಮೋದಿ
ನೀರವ್‌ ಮೋದಿ   

ನವದೆಹಲಿ: ನೀರವ್‌ ಮೋದಿ ಅವರ ಸೋದರಿ ಮತ್ತು ಬಾವಮೈದುನ ಅವರ ₹ 44.41 ಕೋಟಿ ಠೇವಣಿ ಇರುವ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲು ಸಿಂಗಪುರ ಹೈಕೋರ್ಟ್‌ ಆದೇಶಿಸಿದೆ.

ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಈ ಆದೇಶ ಹೊರಬಿದ್ದಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ತಿಳಿಸಿದೆ.

ಖಾತೆಯು ಬ್ರಿಟಿಷ್‌ ವರ್ಜಿನ್‌ ಐಲ್ಯಾಂಡ್‌ ಮೂಲದ ಕಂಪನಿ ಪೆವಿಲಿಯನ್‌ ಪಾಯಿಂಟ್‌ ಕಾರ್ಪೊರೇಷನ್ ಹೆಸರಿನಲ್ಲಿದೆ. ನೀರವ್‌ ಅವರ ಸಹೋದರಿ ಪೂರ್ವಿ ಮೋದಿ ಮತ್ತು ಮಯಾಂಕ್‌ ಮೆಹ್ತಾ ಇದರ ಮಾಲೀಕರು ಎಂದು ಹೇಳಿದೆ.

ADVERTISEMENT

ಪೂರ್ವಿ ಮತ್ತು ಮಯಂಕ್ ಇಬ್ಬರೂ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್‌ನಲ್ಲಿ ಬಂಧಿತರಾಗಿದ್ದಾರೆ. ವಿಚಾರಣೆಗಾಗಿ ಇವರನ್ನು ತಮ್ಮ ವಶಕ್ಕೆ ಪಡೆಯಲು ಭಾರತ ಯತ್ನಿಸುತ್ತಿದೆ.

ಕಳೆದ ವಾರ ನೀರವ್‌ ಮತ್ತು ಪೂರ್ವಿ ಅವರ ₹ 283.16 ಕೋಟಿ ಠೇವಣಿ ಇದ್ದ ಸ್ವಿಸ್ ಬ್ಯಾಂಕ್‌ನ ಖಾತೆಗಳನ್ನು ಇದೇ ಮಾದರಿಯಲ್ಲಿ ಸ್ಥಗಿತಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.