ADVERTISEMENT

ಪಿಎನ್‌ಬಿ ವಂಚನೆ ಪ್ರಕರಣ: ನೀರವ್‌ ಆಪ್ತ ಸುಭಾಷ್‌ ಭಾರತಕ್ಕೆ ಗಡಿಪಾರು

ಐಎಎನ್ಎಸ್
Published 12 ಏಪ್ರಿಲ್ 2022, 5:01 IST
Last Updated 12 ಏಪ್ರಿಲ್ 2022, 5:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಪ್ರಕರಣದಲ್ಲಿ ದೇಶ ತೊರೆದು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ್ ಎಂಬುವವರನ್ನು ಈಜಿಪ್ಟ್‌ನಿಂದ ಮುಂಬೈಗೆ ಗಡಿಪಾರು ಮಾಡಲಾಗಿದೆ.

‘ಸುಭಾಷ್‌ ಶಂಕರ್‌ ಅವರನ್ನು ಬಂಧಿಸಲಾಗಿದೆ. ಅವರನ್ನು ಮುಂಬೈ ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇವೆ. ವಶಕ್ಕೆ ಪಡೆದ ನಂತರ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನೀರವ್ ಮೋದಿ ಕಂಪನಿಯಲ್ಲಿಶಂಕರ್ ಅವರು ಹಣಕಾಸು ವಿಭಾಗದ ಡಿಜಿಎಂ ಆಗಿದ್ದರು. ಅವರ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

ADVERTISEMENT

₹7000 ಕೋಟಿಗಳ ಪಿಎನ್‌ಬಿಯ ಸಾಲ ವಂಚನೆ ಪ್ರಕರಣದ ಆರೋಪಿಗಳನ್ನು ಭಾರತಕ್ಕೆ ಕರೆತರಲು ಸಿಬಿಐ ದೀರ್ಘಕಾಲದಿಂದಲೂ ಪ‍್ರಯತ್ನಿಸುತ್ತಿದೆ.

ಸಿಬಿಐ ನಾಲ್ಕು ವರ್ಷಗಳ ಹಿಂದೆಯೇ ಸುಭಾಷ್‌ ಶಂಕರ್‌ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಅದರ ಆಧಾರದ ಮೇಲೆ ಇಂಟರ್‌ಪೋಲ್‌ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ನ್ಯಾ. ಜೆ.ಸಿ.ಜಗ್ದಾಳೆ ಅವರಿದ್ದ ಸಿಬಿಐ ವಿಶೇಷ ನ್ಯಾಯಾಲಯ ಸುಭಾಷ್‌ ಶಂಕರ್‌ ವಿರುದ್ಧ ಬಂಧನ ವಾರಂಟ್ ಕೂಡ ಹೊರಡಿಸಿತ್ತು.

ಪಿಎನ್‌ಬಿ ಸಾಲ ವಂಚನೆ ಹಗರಣ ಬಯಲಾಗುತ್ತಲೇ 49 ವರ್ಷದ ಶಂಕರ್ ಅವರು ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಜೊತೆಗೆ 2018ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.