ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿ ಗೋಕುಲನಾಥ್ ಶೆಟ್ಟಿ ಅವರು ಆದಾಯಕ್ಕಿಂತಲೂ ಶೇಕಡ 238.44ರಷ್ಟು ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಸಿಬಿಐ ಪ್ರತಿಪಾದಿಸಿದೆ.
ಗೋಕುಲನಾಥ್ ಶೆಟ್ಟಿ ಹಾಗೂ ಅವರ ಪತ್ನಿ ಆಶಾಲತಾ ವಿರುದ್ಧ ಸಿಬಿಐ ಈಗ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದೆ.
ಮುಂಬೈನ ಇಂಡಿಯನ್ ಬ್ಯಾಂಕ್‌ನಲ್ಲಿ ಆಶಾಲತಾ ಕ್ಲರ್ಕ್ ಹುದ್ದೆಯಲ್ಲಿದ್ದಾರೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬಯಲಿಗೆ ಬಂದಾಗ ಗೋಕುಲನಾಥ್ ಶೆಟ್ಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಉಪ ಮಹಾಪ್ರಬಂಧಕರಾಗಿದ್ದರು.
2011ರ ಏಪ್ರಿಲ್ 1ರಿಂದ 2017ರ ಮೇ 31ರವರ ಅವಧಿಯಲ್ಲಿನ ಆಸ್ತಿಯನ್ನು ಪರಿಶೀಲಿಸಿದಾಗ ಶೆಟ್ಟಿ ದಂಪತಿ ಆದಾಯಕ್ಕಿಂತಲೂ ₹2.63 ಕೋಟಿ (ಶೇಕಡ 238.44) ಹೆಚ್ಚು ಹೊಂದಿರುವುದು ಪತ್ತೆಯಾಯಿತು.
ಆಸ್ತಿ ಖರೀದಿಸುವಾಗ ಆಶಾಲತಾ ಸಹ ಪತಿಗೆ ನೆರವಾಗಿದ್ದಾರೆ. ಈ ಮೂಲಕ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.