ಕಾಜಿರಂಗ: ಕೊಂಬುಗಳನ್ನು ಕಿತ್ತಿರುವ ಗಂಡು ಖಡ್ಗಮೃಗದ ಮೃತದೇಹ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಶನಿವಾರ ಪತ್ತೆಯಾಗಿದೆ.
ಬಗೋರಿ ಪ್ರದೇಶದ ಭುಲುಕಜನ್ ಅರಣ್ಯ ಪ್ರದೇಶದಲ್ಲಿ ಜೀಪ್ ಸಫಾರಿಗೆ ತೆರಳಿದ್ದ ಪ್ರವಾಸಿಗರು ಖಡ್ಗಮೃಗದ ಮೃತದೇಹವನ್ನು ನೋಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
’ಶುಕ್ರವಾರ ರಾತ್ರಿ ಗುಂಡಿನ ಸದ್ದು ಕೇಳಿ ಬಂದಿತ್ತು. ಸಮೀಪದಲ್ಲಿ ಮದುವೆ ಸಮಾರಂಭವಿದ್ದುದರಿಂದ ಅಲ್ಲಿ ಪಟಾಕಿ ಹೊಡೆದ ಸದ್ದು ಕೇಳಿಸಿರಬಹುದೆಂದು ನಾವು ಭಾವಿಸಿದ್ದೆವು‘ ಎಂದು ವಿಭಾಗೀಯ ಅರಣ್ಯಾಧಿಕಾರಿ ರೊಹೊನಿ ಬಲ್ಲವ್ ಸೈಕಿಯಾ ತಿಳಿಸಿದ್ದಾರೆ.
ಇದರೊಂದಿಗೆ ಈ ವರ್ಷ ಇಲ್ಲಿ ಹತ್ಯೆಗೀಡಾಗಿರುವ ಖಡ್ಗಮೃಗಗಳ ಸಂಖ್ಯೆ ಆರಕ್ಕೇರಿದೆ.
ಮೇ 11ರಂದು ಚಿರಕೋವಾ ಪ್ರದೇಶದಲ್ಲಿ ಗಂಡು ಖಡ್ಗಮೃಗದ ಮೃತದೇಹ ಪತ್ತೆಯಾಗಿತ್ತು. ಮೃತದೇಹದಲ್ಲಿ ಗುಂಡೇಟಿನಿಂದಾದ ಗಾಯಗಳಿದ್ದುವು. ಅದರ ಕೊಂಬುಗಳನ್ನೂ ಕಿತ್ತು ತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.