ಸ್ಪ್ರಿಂಗ್‌ಫೀಲ್ಡ್ (ಅಮೆರಿಕ): ತಂದೆಯ ಅಜಾಗರೂಕತೆಯಿಂದ 11 ತಿಂಗಳ ಶಿಶು ಕಾರಿನಲ್ಲಿ ಮೃತಪಟ್ಟಿರುವ ಘಟನೆ ಉತ್ತರ ವರ್ಜಿನಿಯಾದಲ್ಲಿ ನಡೆದಿದೆ.
ಮಗುವಿನ ತಂದೆ ಎಸ್‌ಯುವಿ ಕಾರಿನ ಹಿಂದಿನ ಸೀಟಿನಲ್ಲಿ ಮಗುವನ್ನು ಮರೆತು, ಬೇರೆ ಕಾರಿನಲ್ಲಿ ತನ್ನ ಇನ್ನೊಂದು ಮಗುವನ್ನು ಕರೆತರಲು ಹೊರಟಿದ್ದಾರೆ. ದೀರ್ಘಕಾಲ ಮುಚ್ಚಿದ ಕಾರಿನಲ್ಲಿ ಶಿಶು ಇದ್ದ ಕಾರಣ, ಅದು ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.