ಅಹಮದಾಬಾದ್: ಗುಜರಾತ್ ರಾಜ್ಯದ ಪ್ರತಿಷ್ಠೆಗೆ ‘ಕಳಂಕ’ ತರುವ ವಿಡಿಯೊ ಪೋಸ್ಟ್ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿದ ಆರೋಪದಲ್ಲಿ ಅಹಮದಾಬಾದ್ ಪೊಲೀಸರ ಸೈಬರ್ ಸೆಲ್ ಘಟಕವು ‘ಎಕ್ಸ್’ ಬಳಕೆದಾರರೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.
‘ಮಿಸ್ ಪಾಯಲ್ ಗುಪ್ತಾ’ ಎಂಬ ಹೆಸರಿನ ‘ಎಕ್ಸ್’ ಖಾತೆ ಹೊಂದಿರುವ ಪಾಯಲ್ ಗುಪ್ತಾ ಎಂಬಾಕೆ ವಿರುದ್ಧ ಪ್ರಕರಣ ದಾಖಲಾಗಿದೆ. ತಾನು ಬೆಂಗಳೂರಿನ ನಿವಾಸಿ ಎಂದು ಪಾಯಲ್ ಅವರು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
‘ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅಲ್ಲಿ ಸ್ಥಳದ ಅಭಾವದಿಂದ ಚಿಕಿತ್ಸೆ ಸಿಗದೆ ನೆಲದಲ್ಲೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ಇದು ಗುಜರಾತ್‌ನ ವಿಡಿಯೊ’ ಎಂಬ ಅಡಿಬರಹದೊಂದಿಗೆ ವಿಡಿಯೊ ಪೋಸ್ಟ್ ಮಾಡಿದ್ದ ಪಾಯಲ್, ಬಳಿಕ ಅದನ್ನು ಅಳಿಸಿ ಹಾಕಿದ್ದರು.
ಆದರೆ ವಿಡಿಯೊ ಗಮನಿಸಿದ್ದ ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು.
ಪೋಸ್ಟ್ ಮಾಡಿರುವ ವಿಡಿಯೊ ಗುಜರಾತ್‌ನದ್ದು ಅಲ್ಲ. ಅದು ಛತ್ತೀಸ್‌ಗಢದ ಬಿಲಾಸಪುರದ್ದು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.