ADVERTISEMENT

ರೈತನ ಮನೆಯಿಂದ ₹1.07 ಕೋಟಿ ಕದ್ದಿದ್ದವರನ್ನು ಹಿಡಿದುಕೊಟ್ಟ ಪೊಲೀಸ್ ಶ್ವಾನ!

ರೈತರೊಬ್ಬರ ಮನೆಯಿಂದ ₹1.07 ಕೋಟಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸ್ ಶ್ವಾನದ ಸಹಾಯದಿಂದ ಬಂಧಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 11:34 IST
Last Updated 18 ಅಕ್ಟೋಬರ್ 2024, 11:34 IST
<div class="paragraphs"><p>ಪೊಲೀಸ್ ಶ್ವಾನ</p></div>

ಪೊಲೀಸ್ ಶ್ವಾನ

   

ಅಹಮದಾಬಾದ್: ರೈತರೊಬ್ಬರ ಮನೆಯಿಂದ ₹1.07 ಕೋಟಿ ಕಳವು ಮಾಡಿದ್ದ ಆರೋಪಿಗಳನ್ನು ಪೊಲೀಸ್ ಶ್ವಾನದ ಸಹಾಯದಿಂದ ಬಂಧಿಸಿರುವ ಘಟನೆ ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಡೋಲ್ಕಾ ತಾಲ್ಲೂಕಿನ ಸರ್ಗಾವಾಲಾ ಹಳ್ಳಿಯ 52 ವರ್ಷದ ರೈತರೊಬ್ಬರು ಜಮೀನು ಮಾರಾಟ ಮಾಡಿ ಬಂದಿದ್ದ ಹಣವನ್ನು ಮನೆಯಲ್ಲಿಟ್ಟಿದ್ದರು. ಈ ವೇಳೆ ಮನೆಗೆ ಕನ್ನ ಹಾಕಿದ್ದ ಕಳ್ಳರು ಅದರಲ್ಲಿ ₹1.07 ಕೋಟಿ ಹಣವನ್ನು ಕದ್ದೊಯ್ದಿದ್ದರು.

ADVERTISEMENT

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದ ರೈತ, ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 34 ಶಂಕಿತರನ್ನು ಘಟನಾ ಸ್ಥಳಕ್ಕೆ ಕರೆದುಕೊಂಡು ಬಂದು ಪರೇಡ್ ನಡೆಸಿದ್ದರು. ಇದಕ್ಕಾಗಿ ಪೊಲೀಸ್ ಡಾಬರ್‌ಮನ್ ಶ್ವಾನ ‘ಪೆನ್ನಿ’ಯನ್ನು ಬಳಸಿಕೊಳ್ಳಲಾಗಿತ್ತು.

ಪೆರೇಡ್‌ ಸಂದರ್ಭದಲ್ಲಿ ಬುದಾ ಸೋಳಂಕಿ ಎಂಬುವರ ಮೇಲೆ ಶ್ವಾನ ‘ಪೆನ್ನಿ’ ಅನುಮಾನ ವ್ಯಕ್ತಪಡಿಸಿತ್ತು. ಆತನ ಮನೆಗೆ ಪೊಲೀಸರನ್ನು ಕರೆದುಕೊಂಡು ಹೋಗಿತ್ತು. ಈ ವೇಳೆ ತಪಾಸಣೆ ನಡೆಸಿದ ಪೊಲೀಸರು ಬುದಾ ಸೋಳಂಕಿ ಮನೆಯಿಂದ ಕಳವಾಗಿದ್ದ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬುದಾ ಸೋಳಂಕಿ ಹಾಗೂ ವಿಕ್ರಮ್ ಸೋಳಂಕಿ ಎಂಬುವರನ್ನು ಬಂಧಿಸಲಾಗಿದೆ. ಕೇವಲ ಒಂದೇ ದಿನದಲ್ಲಿ ಕಳ್ಳತನ ಪ್ರಕರಣವನ್ನು ಬೇಧಿಸುವಲ್ಲಿ ಚಾಣಾಕ್ಷತೆ ತೋರಿಸಿದ ಪೆನ್ನಿ ಶ್ವಾನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.