ADVERTISEMENT

ರೈತರ ಧರಣಿ: ದೆಹಲಿಯ ರಸ್ತೆಗಳಲ್ಲಿ ಲೋಹ, ಕಾಂಕ್ರೀಟ್ ತಡೆಗೋಡೆ; ಭದ್ರತೆ ಬಿಗಿ

ಪಿಟಿಐ
Published 13 ಫೆಬ್ರುವರಿ 2024, 14:20 IST
Last Updated 13 ಫೆಬ್ರುವರಿ 2024, 14:20 IST
<div class="paragraphs"><p>ನವದೆಹಲಿಯ ಟಿಕರಿ ಗಡಿಯಲ್ಲಿ ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕುವ ಮೂಲಕ ಪೊಲೀಸರು ಗಡಿಯಲ್ಲಿ ಭದ್ರತೆ ಹೆಚ್ಚಿಸಿದರು</p></div>

ನವದೆಹಲಿಯ ಟಿಕರಿ ಗಡಿಯಲ್ಲಿ ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕುವ ಮೂಲಕ ಪೊಲೀಸರು ಗಡಿಯಲ್ಲಿ ಭದ್ರತೆ ಹೆಚ್ಚಿಸಿದರು

   

ಪಿಟಿಐ ಚಿತ್ರ

ADVERTISEMENT

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ದೆಹಲಿ ಚಲೋ ರ‍್ಯಾಲಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. 

ಸಾಗಿ ಬರುತ್ತಿರುವ ರೈತರ ರ‍್ಯಾಲಿಯನ್ನು ತಡೆಯಲು ಶಂಭು, ಸಿಂಘು ಗಡಿಯಲ್ಲಿ ಹಲವು ಹಂತದ ತಡೆಬೇಲಿಗಳನ್ನು ಪೊಲೀಸರು ಹಾಕಿದ್ದಾರೆ. ಇದರೊಂದಿಗೆ ಟಿಕರಿ ಹಾಗೂ ಗಾಜಿಪುರದಲ್ಲೂ ಭದ್ರತೆ ಹೆಚ್ಚಿಸಲಾಗಿದೆ.

ಬೇಡಿಕೆ ಈಡೇರಿಕೆಗಾಗಿ ರೈತರು ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜದೂರ್ ಮೋರ್ಚಾ ಹೇಳಿತ್ತು. ಅದರಂತೆ ದೇಶದ ವಿವಿಧ ರಾಜ್ಯಗಳಿಂದ ತೆರಳಿದ ರೈತರು ದೆಹಲಿಯತ್ತ ಹೆಜ್ಜೆ ಹಾಕಿದ್ದಾರೆ. 

ದೆಹಲಿ ಹಾಗೂ ಹರಿಯಾಣ ಗಡಿಯಲ್ಲಿ ಪೊಲೀಸರ ತಡೆಬೇಲಿಯನ್ನು ದಾಟಿ ರೈತರು ಮುನ್ನುಗ್ಗಿದ್ದಾರೆ. ಕಳೆದ ಬಾರಿ ರೈತರ ಪ್ರತಿಭಟನೆ ವೇಳೆ ರಾಷ್ಟ್ರಧ್ವಜ ಹಾರಿಸಲಾಗಿದ್ದ ಕೆಂಪುಕೋಟೆಗೆ ಈ ಬಾರಿ ಭದ್ರತೆ ಹೆಚ್ಚಿಸಲಾಗಿದೆ.

ರಾಜೀವ್ ಚೌಕ್, ಮಂಡಿ ಹೌಸ್, ಸೆಂಟ್ರಲ್ ಸೆಕ್ರೇಟರಿಯೇಟ್, ಪಟೇಲ್ ಚೌಕ್, ಉದ್ಯೋಗ ಭವನ, ಜನಪತ, ಬಾರಾಕಂಬ ರಸ್ತೆ, ಲೋಕ ಕಲ್ಯಾಣ ಮಾರ್ಗ ಹಾಗೂ ಖಾನ್ ಮಾರುಕಟ್ಟೆ ಒಳಗೊಂಡಂತೆ ದೆಹಲಿ ಮೆಟ್ರೊದ 9 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮ ದ್ವಾರಗಳನ್ನು ಮುಚ್ಚಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ಪರಿಸ್ಥಿತಿ ಎದುರಿಸಲು ಪೊಲೀಸ್ ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಹಲವು ಹಂತಗಳ ಬ್ಯಾರಿಕೇಡ್‌ಗಳನ್ನು ರಸ್ತೆಗಳಲ್ಲಿ ಹಾಕಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಲೋಹ ಮತ್ತು ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.