ADVERTISEMENT

ಜಲಂಧರ್‌ನಲ್ಲಿ ಯುವತಿಯರ ಮೇಲೆ ಹರಿದ ಇನ್ಸ್‌ಪೆಕ್ಟರ್‌ ಕಾರು: ಒಬ್ಬರ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಅಕ್ಟೋಬರ್ 2021, 11:32 IST
Last Updated 18 ಅಕ್ಟೋಬರ್ 2021, 11:32 IST
ಅಪಘಾತದ ದೃಶ್ಯ
ಅಪಘಾತದ ದೃಶ್ಯ    

ಜಲಂಧರ್‌: ಪಂಜಾಬ್‌ನ ಜಲಂಧರ್‌ನಲ್ಲಿ ಸೋಮವಾರ ಬೆಳಗ್ಗೆ ರಸ್ತೆ ದಾಟುತ್ತಿದ್ದ ಇಬ್ಬರು ಯುವತಿಯರ ಮೇಲೆ ಕಾರು ಹರದಿದೆ. ಘಟನೆಯಲ್ಲಿ ಒಬ್ಬ ಯುವತಿಯು ಮೃತಪಟ್ಟಿದ್ದರೆ ಮತ್ತೊಬ್ಬರು ತೀವ್ರ ವಾಗಿ ಗಾಯಗೊಂಡಿದ್ದಾರೆ.

ಕಾರು ಚಲಾಯಿಸುತ್ತಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ಅನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ವರದಿ ಮಾಡಿವೆ.

ಕಾರ್ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ನವಜೋತ್ ಕೌರ್ ಮೃತ ಯುವತಿ. ಮತ್ತೊಬ್ಬರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ದುರ್ಘಟನೆಯು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ದಾಟಲು ಇಬ್ಬರು ಯುವತಿಯರು ರಸ್ತೆ ವಿಭಾಜಕದ ಮೇಲೆ ನಿಂತಿರುವುದು, ದಾಟಲು ಹೊರಟಾಗ ಅವರಿಗೆ ಬಿಳಿ ಮಾರುತಿ ಬ್ರೆಜಾ ಕಾರು ಡಿಕ್ಕಿ ಹೊಡೆಯುವುದು ಅದರಲ್ಲಿ ದಾಖಲಾಗಿದೆ.

ಸೋಮವಾರ ಬೆಳಗ್ಗೆ 8.30ರಲ್ಲಿ ದುರ್ಘಟನೆ ನಡೆದಿದೆ. ಕಾರನ್ನು ಇನ್‌ಸ್ಪೆಕ್ಟರ್ ಅಮೃತ್ ಪಾಲ್ ಸಿಂಗ್ ಎಂಬುವವರು ಚಾಲನೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಯುವತಿಯರಿಗೆ ಕಾರು ರಭಸದಲ್ಲಿ ಗುದ್ದಿದ ನಂತರವೂ, ಚಾಲಕ ನಿಲ್ಲಿಸದೇ ಅದೇ ವೇಗದಲ್ಲಿ ಪಲಾಯನ ಮಾಡುವುದು ಸಿಸಿಟಿವಿ ದೃಶ್ಯಗಳಿಂದ ಗೊತ್ತಾಗಿದೆ.

ಅಪಘಾತದ ನಂತರ, ಜಲಂಧರ್-ಫಗ್ವಾರಾ ಹೆದ್ದಾರಿಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.