ADVERTISEMENT

ಕಾಶಿ, ಮಥುರಾ ವಿವಾದ– ಕೋರ್ಟ್‌ ಹೊರಗೆ ‍‍ಪರಿಹರಿಸಿಕೊಳ್ಳಬೇಕು: ಅಜ್ಮೀರ್ ಮುಖ್ಯಸ್ಥ

ಪಿಟಿಐ
Published 23 ಫೆಬ್ರುವರಿ 2024, 4:53 IST
Last Updated 23 ಫೆಬ್ರುವರಿ 2024, 4:53 IST
   

ಜೈಪುರ: ಮಥುರಾ ಹಾಗೂ ಕಾಶಿ ವಿವಾದವನ್ನು ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಅಜ್ಮೀರ್ ದರ್ಗಾ ಮುಖ್ಯಸ್ಥ ಸೈಯದ್ ಝೈನುಲ್ ಆಬಿದೀನ್ ಹೇಳಿದ್ದಾರೆ.

ಪರಸ್ಪರ ಒಪ್ಪಿಗೆಯಿಂದ ಬಗೆಹರಿಸುವ ಸಮಸ್ಯೆಗಳು ಜನರ ಹೃದಯ ಗೆಲ್ಲುವುದಲ್ಲದೇ, ಸಮುದಾಯಗಳ ನಂಬಿಕೆಗಳನ್ನೂ ಉಳಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಖಿಲ ಭಾರತ ಸೂಫಿ ಸಜ್ಜಾದಂಶಿನ್ ‘ಪೈಗಾಮ್–ಇ–ಮೊಹಬ್ಬತ್ ಸಬ್‌ ಕಾ ಭಾರತ್‌’ ಎನ್ನುವ ಸಮಾವೇಶದಲ್ಲಿ ಅವರು ಮಾತನಾಡಿದರು. ರಾಜಸ್ಥಾನದ ಎಲ್ಲಾ ದರ್ಗಾಗಳ ಮುಖ್ಯಸ್ಥರು ಈ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

‘ವಸುಧೈವ ಕುಟಂಬಕಂ ನಾಗರೀಕತೆಯನ್ನು ಅನುಸರಿಸುವ ಮೂಲಕ ವಿಶ್ವದಲ್ಲಿ ಶಾಂತಿಯನ್ನು ಮರುಸ್ಥಾಪಿಸುವಲ್ಲಿ ಭಾರತವು ಸಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ’ ಎಂದು ಅವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆಯೂ ಮಾತನಾಡಿರುವ ಅವರು, ಕಳೆದ ಕೆಲವು ವರ್ಷಗಳಲ್ಲಿ ಸಿಎಎ ಬಗ್ಗೆ ಮುಸ್ಲಿಮರನ್ನು ತಪ್ಪು ದಾರಿಗೆಳೆಯಲಾಗುತ್ತಿದೆ. ಈ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ಸಮಸ್ಯೆ ಇಲ್ಲ. ಯಾವ ಪರಿಣಾಮವೂ ಬೀರದು. ಅಫ್ಗಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶದ ಸಮಸ್ಯೆಗೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುತ್ತದೆ. ಯಾವುದೇ ಭಾರತೀಯರ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ. ಅಂತ ಯಾವುದೇ ಅವಕಾಶವೂ ಈ ಕಾನೂನಿನಲ್ಲಿ ಇಲ್ಲ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.