ಕೋಲ್ಕತ್ತ: ದೇಶದಲ್ಲಿ ನಡೆಯುತ್ತಿರುವ ‘ಪ್ರತ್ಯೇಕತೆಯ ರಾಜಕೀಯ’ ಸ್ವಾಗತಾರ್ಹವಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನಗರದ ರೆಡ್ ರೋಡ್‌ನಲ್ಲಿ ಈದ್ ಉಲ್ ಫಿತ್ರ್ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಅವರು, ಮುಸ್ಲಿಮರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
‘ದೇಶದಲ್ಲಿ ಸದ್ಯದ ಪರಿಸ್ಥಿತಿ ಚೆನ್ನಾಗಿಲ್ಲ, ಒಡೆದು ಆಳುವ ನೀತಿ ದೇಶದಾದ್ಯಂತ ವ್ಯಾಪಿಸಿದೆ. ಇದಕ್ಕೆ ಭಯಪಡಬಾರದು, ಉತ್ತಮ ಭವಿಷ್ಯಕ್ಕಾಗಿ ಒಂದಾಗಿ ಹೋರಾಟ ಮುಂದುವರಿಸಬೇಕಿದೆ’ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ನಿಮಗೆ (ಮುಸ್ಲಿಮರಿಗೆ) ದುಃಖವನ್ನುಂಟುಮಾಡುವ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಮಮತಾ ಭರವಸೆ ನೀಡಿದ್ದಾರೆ. ಪ್ರಾರ್ಥನೆಯಲ್ಲಿ 14,000 ಮಂದಿ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.