ADVERTISEMENT

ಕೇಂದ್ರ ಸಚಿವ ತೆಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಸಾರವಾಯಿತು ನೀಲಿ ಚಿತ್ರ!

​ಪ್ರಜಾವಾಣಿ ವಾರ್ತೆ
Published 3 ಮೇ 2022, 9:49 IST
Last Updated 3 ಮೇ 2022, 9:49 IST
ರಾಮೇಶ್ವರ್ ತೆಲಿ, ಪಿಟಿಐ ಚಿತ್ರ
ರಾಮೇಶ್ವರ್ ತೆಲಿ, ಪಿಟಿಐ ಚಿತ್ರ   

ದಿಬ್ರೂಗಡ: ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೆಲಿಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ನೀಲಿ ಚಿತ್ರ ಪ್ರಸಾರವಾಗಿರುವ ಘಟನೆ ಅಸ್ಸಾಂನ ತಿನ್‌ಸುಕಿಯಾದಲ್ಲಿ ಇತ್ತೀಚೆಗೆ ನಡೆದಿದೆ.

ತಿನ್‌ಸುಕಿಯಾದಲ್ಲಿ ಇಂಡಿಯನ್ ಆಯಿಲ್ ಕಂಪನಿಯ ನೂತನ ಪೆಟ್ರೋಲ್ ಬಿಡುಗಡೆ ಸಮಾರಂಭದಲ್ಲಿ ತೇಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಮೇಲಿನ ಪರದೆಯಲ್ಲಿ ನೂತನ ಪೆಟ್ರೋಲ್ ಬಗ್ಗೆ ಮಾಹಿತಿ ನೀಡುವ ವಿಡಿಯೊ ಪ್ರಸಾರ ಮಾಡುವಾಗ ಕಾರ್ಯಕ್ರಮ ನಿರ್ವಾಹಕರ ಅಚಾತುರ್ಯದಿಂದ ಸುಮಾರು ಐದರಿಂದ ಆರು ಸೆಕೆಂಡ್ ನೀಲಿ ಚಿತ್ರ ಪ್ರಸಾರವಾಗಿದೆ ಎಂದು ಕೆಲ ಇಂಗ್ಲಿಷ್ ಮಾಧ್ಯಮಗಳು ವರದಿ ಮಾಡಿವೆ.

ನೀಲಿ ಚಿತ್ರ ಪ್ರಸಾರವಾಗುವ ವೇಳೆ ಸಚಿವ ತೇಲಿ, ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್, ಇಂಡಿಯನ್ ಆಯಿಲ್ ಕಂಪನಿಯ ಅಧ್ಯಕ್ಷ ಎಸ್.ಎಂ. ವಿದ್ಯಾ, ಅಸ್ಸಾಂ ಕಾರ್ಮಿಕ ಸಚಿವ ಸಂಜಯ್ ಕಿಶನ್ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳು ಅಲ್ಲಿದ್ದರು.

ADVERTISEMENT

ಕ್ಲಿಪ್ ಪ್ರಸಾರವಾಗುವಾಗ ನಾನು ನೋಡಲಿಲ್ಲ, ಬಳಿಕ ನಮ್ಮ ಆಪ್ತ ಕಾರ್ಯದರ್ಶಿ ಈ ರೀತಿಯ ಘಟನೆ ನಡೆದಿದೆ ಎಂದು ತನ್ನ ಗಮನಕ್ಕೆ ತಂದರು ಎಂದು ಸಚಿವ ತೆಲಿಹೇಳಿದ್ದಾರೆ.

ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ದಿಬ್ರೂಗಢ್ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.