ADVERTISEMENT

ಹಂದ್ವಾರ ದಾಳಿಗೆ ಪ್ರತಿಯಾಗಿ ಮತ್ತೆ ನಿರ್ದಿಷ್ಟ ದಾಳಿ ನಡೆಸಿ: ಶಿವಸೇನಾ

ಪಿಟಿಐ
Published 5 ಮೇ 2020, 18:29 IST
Last Updated 5 ಮೇ 2020, 18:29 IST
ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್‌ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಉತ್ತರ ಕಾಶ್ಮೀರದ ಹಂದ್ವಾರದಲ್ಲಿ ಉಗ್ರರ ಗುಂಡಿಗೆ ಹುತಾತ್ಮರಾದ ಸಬ್ ಇನ್‌ಸ್ಪೆಕ್ಟರ್ ಖಾಜಿ ಎಸ್.ಎ.ಪಠಾಣ್ ಅವರಿಗೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.   

ಮುಂಬೈ: ‘ಕಾಶ್ಮೀರದ ಹಂದ್ವಾರದಲ್ಲಿ ಭಾನುವಾರ ಸೇನೆಯ ಐವರು ಸಿಬ್ಬಂದಿಯನ್ನು ಕಳೆದುಕೊಂಡಿದ್ದಕ್ಕೆ ಪ್ರತಿಯಾಗಿ ಭಾರತ ನಿರ್ದಿಷ್ಟ ದಾಳಿ ನಡೆಸಬೇಕು. ಆದರೆ ಆ ಕುರಿತು ಪ್ರಚಾರ ಮಾಡಬಾರದು’ ಎಂದು ಶಿವಸೇನಾ ಮಂಗಳವಾರ ಹೇಳಿದೆ.

‘ಕೋವಿಡ್-19‌ರಿಂದ ಉಂಟಾಗಿರುವ ಸ್ಥಿತಿಯಿಂದಾಗಿ, ‘ಕಾಶ್ಮೀರ ಯುದ್ಧ’ದ ಕುರಿತು ದೇಶ ಮರೆತುಹೋಗಿದೆ. ಆದರೆ ಪಾಕಿಸ್ತಾನ ಇದನ್ನು ಮರೆತಿಲ್ಲ’ ಎಂದು ಶಿವಸೇನಾಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಲಾಗಿದೆ.

ಯಾವುದೇ ಪಕ್ಷದ ಹೆಸರು ಉಲ್ಲೇಖಿಸದ ಶಿವಸೇನಾ, ‘ಹಂದ್ವಾರದಲ್ಲಿ ಹುತಾತ್ಮರಾದವರ ಕುಟುಂಬದವರ ಮೇಲೂ ಯಾರಾದರೂ ಹೂಮಳೆ ಸುರಿಸಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಲ್ಲಿ ಒಬ್ಬ ಮುಸ್ಲಿಂ ಸಹ ಸೇರಿದ್ದರು. ಹಿಂದು-ಮುಸ್ಲಿಂ ರಾಜಕೀಯ ಮಾಡುತ್ತಿರುವವರು ಇದನ್ನು ಮರೆಯಬಾರದು’ ಎಂದು ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.