ADVERTISEMENT

ಛೋಟಾ ರಾಜನ್ ಚಿತ್ರವುಳ್ಳ ಅಂಚೆ ಚೀಟಿ ಮುದ್ರಣ!

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 11:44 IST
Last Updated 28 ಡಿಸೆಂಬರ್ 2020, 11:44 IST
ಭೂಗತದೊರೆ ಛೋಟಾರಾಜನ್ (ಪ್ರಾತಿನಿಧಿಕ ಚಿತ್ರ)
ಭೂಗತದೊರೆ ಛೋಟಾರಾಜನ್ (ಪ್ರಾತಿನಿಧಿಕ ಚಿತ್ರ)   

ಲಖನೌ: ಉತ್ತರ ಪ್ರದೇಶ ಕಾನ್ಪುರ ಪಟ್ಟಣದ ಅಂಚೆ ಕಚೇರಿಯು ಭೂಗತದೊರೆ ಛೋಟಾರಾಜನ್‌ ಮತ್ತು ಹತನಾಗಿರುವ ಭೂಗತಪಾತಕಿ ಮುನ್ನಾ ಭಜರಂಗಿ ಅವರ ಭಾವಚಿತ್ರವುಳ್ಳ ಅಂಚೆ ಚೀಟಿಯನ್ನು ಮುದ್ರಿಸಿದೆ.

ಮೂಲಗಳ ಪ್ರಕಾರ, ಇಲ್ಲಿನ ಬಾರಾ ಚೌರಾಹಾ ಪ್ರದೇಶದಲ್ಲಿರುವ ಜಿಪಿಒ, ಈ ಇಬ್ಬರು ಅಪರಾಧಿಗಳ ಚಿತ್ರಗಳನ್ನು ಒಳಗೊಂಡಿರುವ ಅಂಚೆ ಚೀಟಿಗಳನ್ನು ‘ಮೈ ಸ್ಟಾಂಪ್’ ಯೋಜನೆಯಡಿ ಮುದ್ರಿಸಿದೆ.

ಯೋಜನೆಯಡಿ ಆಸಕ್ತರು ನಿಗದಿತ ಶುಲ್ಕ ಪಾವತಿಸಿ ತಮ್ಮ ವ್ಯಕ್ತಿ ಚಿತ್ರವುಳ್ಳ ಅಂಚೆಚೀಟಿಯ ಹಾಳೆಗಳನ್ನು ಪಡೆಯಬಹುದು. ಈ ಸ್ಟಾಂಪ್‌ಗಳನ್ನು ಪತ್ರ, ಲಕೋಟೆ ಕಳುಹಿಸಲು ಬಳಸಬಹುದು. ಇದಕ್ಕಾಗಿ ಅರ್ಜಿದಾರರರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಗುರುತು ಖಾತರಿಪಡಿಸುವ ದಾಖಲೆಯನ್ನು ಅಂಚೆ ಅಧಿಕಾರಿಗಳಿಗೆ ನೀಡಬೇಕು.

ADVERTISEMENT

ಸ್ಥಳೀಯ ಹಿಂದಿ ಪತ್ರಿಕೆಯೊಂದು ಇದನ್ನು ಬಹಿರಂಗ ಪಡಿಸುವ ಮೂಲಕ ಅಂಚೆ ಕಚೇರಿಯ ಕಾರ್ಯವೈಖರಿಯನ್ನು ಬಯಲು ಮಾಡಿದೆ.

ಈ ಘಟನೆಯ ಹಿಂದೆಯೇ ಇರಿಸುಮುರಿಸಿಗೆ ಒಳಗಾಗಿರುವ ಅಂಚೆ ಇಲಾಖೆಯ ಅಧಿಕಾರಿಗಳು ಘಟನೆ ಕುರಿತು ತನಿಖೆ ನಡೆಸಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ದಾಖಲೆಗಳನ್ನು ಪರಿಶೀಲಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಜತೆಗೆ, ವ್ಯಕ್ತಿ ಜೀವಂತವಾಗಿದ್ದರೆ ಮಾತ್ರ, ಅವರ ಚಿತ್ರವನ್ನು ಮುದ್ರಿಸಲಾಗುತ್ತದೆ‘ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.