ನವದೆಹಲಿ: ದೇಶದಲ್ಲಿ ಹೆಲ್ತ್‌ಕೇರ್, ಕೃಷಿ ಮತ್ತು ನಗರಗಳ ಸುಸ್ಥಿರತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮೂರು ಕೃತಕ ಬುದ್ಧಿಮತ್ತೆಯ ನಾವೀನ್ಯತೆಯ ಕೇಂದ್ರಗಳನ್ನು(ಸಿಒಇಎಸ್) ಸ್ಥಾಪಿಸುವುದಾಗಿ ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಘೋಷಿಸಿದ್ದಾರೆ.
ಉದ್ಯಮದ ಪಾಲುದಾರರು ಮತ್ತು ಸ್ಟಾರ್ಟ್‌ಅಪ್‌ಗಳೊಂದಿಗೆ ಒಕ್ಕೂಟದಲ್ಲಿ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ನೇತೃತ್ವದಲ್ಲಿ ಈ ಕೇಂದ್ರಗಳು ನಡೆಯಲಿವೆ.
ಈ ಮೂರೂ ಕೇಂದ್ರಗಳು ಹೆಲ್ತ್‌ಕೇರ್ ವಲಯದಲ್ಲಿ ಕ್ರಾಂತಿಕಾರದ ಬದಲಾವಣೆ, ಆಹಾರ ಭದ್ರತೆ ಬಲಪಡಿಸುವುದು, ನಗರದ ನಿರ್ಣಾಯಕ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನೆರವಾಗಲಿವೆ ಎಂದು ಪ್ರಕಟಣೆ ತಿಳಿಸಿದೆ.
ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ಅಡಿ ಬರುವ ಈ ಎಐ ನಾವಿನ್ಯತೆಯ ಕೇಂದ್ರಗಳು ಭಾರತದ ಎಐ ಸಾಮರ್ಥ್ಯವನ್ನು ವೃದ್ಧಿಸುವ ಜೊತೆಗೆ ಭಾರತದ ಎಐ ಪರಿಸರ ವ್ಯವಸ್ಥೆ ವೃದ್ಧಿಗೆ ಸಹಕಾರಿಯಾಗಲಿವೆ ಎಂದು ಪ್ರಧಾನ್ ತಿಳಿಸಿದ್ದಾರೆ.
‘ಎಐ ಕೇಂದ್ರಗಳು ಜಾಗತಿಕವಾಗಿ ಜನರ ಒಳಿತಿಗೆ ಸಂಬಂಧಿಸಿದ ದೇವಸ್ಥಾನಗಳಾಗಿವೆ. ಭಾರತದಲ್ಲಿರುವ ಅದ್ಭುತ ಪ್ರತಿಭೆ ಮತ್ತು ಉತ್ಸಾಹದ ಮೂಲಕ ಇವು ಮುಂಬರುವ ದಿನಗಳಲ್ಲಿ ಜಾಗತಿಕ ಸಾರ್ವಜನಿಕ ನೀತಿಯ ಪ್ರಮುಖ ಅಂಶವಾಗಲಿವೆ’ಎಂದಿದ್ದಾರೆ.
ನಮ್ಮ ದೇಶದಲ್ಲಿನ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಈ ಕೇಂದ್ರಗಳು ಮತ್ತಷ್ಟು ಉತ್ತೇಜನವನ್ನು ನೀಡುತ್ತವೆ. ಹೊಸ ಪೀಳಿಗೆಯ ಉದ್ಯೋಗವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಮತ್ತು ಜಾಗತಿಕ ಸಾರ್ವಜನಿಕ ಒಳಿತಿನ ಹೊಸ ಮಾದರಿಗಳನ್ನು ಸ್ಥಾಪಿಸುತ್ತವೆ ಎಂದು ಅವರು ಹೇಳಿದ್ದಾರೆ.
ಮೇಕ್ ಇನ್ ಇಂಡಿಯಾ ದೂರದೃಷ್ಟಿಯ ಭಾಗವಾಗಿ ಎಐ ಕೇಂದ್ರಗಳು ಭಾರತಕ್ಕಾಗಿ ಕೆಲಸ ಮಾಡಲಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.