ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 03 ಅಕ್ಟೋಬರ್‌ 2023

ಪ್ರಜಾವಾಣಿ ವಿಶೇಷ
Published 3 ಅಕ್ಟೋಬರ್ 2023, 13:22 IST
Last Updated 3 ಅಕ್ಟೋಬರ್ 2023, 13:22 IST
<div class="paragraphs"><p>ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..</p></div>

ರಾಜ್ಯ, ದೇಶ, ವಿದೇಶದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

   

ನಾಂದೇಡ್ ಆಸ್ಪತ್ರೆ ದುರಂತ | ಮತ್ತೆ 7 ಸಾವು; ಮೃತರ ಸಂಖ್ಯೆ 31ಕ್ಕೆ ಏರಿಕೆ, ಶಿವಮೊಗ್ಗ ಕೋಮು ಗಲಭೆಗೆ ಸಿದ್ದರಾಮಯ್ಯ, ಪರಮೇಶ್ವರ ಕುಮ್ಮಕ್ಕು: ಶೋಭಾ ಕರಂದ್ಲಾಜೆ, Asian Games | kabaddi: ಭಾರತ ಪುರುಷ-ಮಹಿಳಾ ತಂಡಗಳ ಮೇಲುಗೈ ಸೇರಿದಂತೆ ಈ ದಿನದ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ.

ನಾಂದೇಡ್ ಆಸ್ಪತ್ರೆ ದುರಂತ | ಮತ್ತೆ 7 ಸಾವು; ಮೃತರ ಸಂಖ್ಯೆ 31ಕ್ಕೆ ಏರಿಕೆ

ನಾಂದೇಡ್‌ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಸೇರಿದಂತೆ 7 ಮಂದಿ ಕಳೆದ ರಾತ್ರಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಆಸ್ಪತ್ರೆಯಲ್ಲಿ 48 ಗಂಟೆಗಳಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ತಲುಪಿದೆ ಎಂದು 'ಎನ್‌ಡಿಟಿವಿ' ಮಂಗಳವಾರ ವರದಿ ಮಾಡಿದೆ.

ADVERTISEMENT

ಸಂಪೂರ್ಣ ಸುದ್ದಿ ಓದಿ

NewsClick ಸುದ್ದಿ ಸಂಸ್ಥೆಯ ಮೇಲೆ ಪೊಲೀಸ್‌ ದಾಳಿ ಖಂಡಿಸಿದ ‘ಇಂಡಿಯಾ’ ಒಕ್ಕೂಟ

ನ್ಯೂಸ್‌ ಕ್ಲಿಕ್‌ ಆನ್‌ಲೈನ್‌ ಸುದ್ದಿ ಸಂಸ್ಥೆ ಹಾಗೂ ಅದರ ಪತ್ರಕರ್ತರ ಮೇಲೆ ದೆಹಲಿ ಪೊಲೀಸರು ನಡೆಸಿದ ದಾಳಿಯನ್ನು ವಿರೋಧ ‍ಪಕ್ಷಗಳ ‘ಇಂಡಿಯಾ’ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಸಂಪೂರ್ಣ ಸುದ್ದಿ ಓದಿ

18ರ ಯುವಕನ ಕೈಚಳಕ: ಮಿನಿ ರೋಲ್ಸ್ ರಾಯ್ಸ್‌ ಆದ ಮಾರುತಿ 800

ಕೇರಳದ 18 ವರ್ಷದ ಯುವಕ ಮನೆಯಲ್ಲಿದ್ದ ಮಾರುತಿ 800 ಕಾರನ್ನು ₹45,000 ಖರ್ಚಿನಲ್ಲಿ ಮಿನಿ ರೋಲ್ಸ್ ರಾಯ್ಸ್ (Rolls Royce) ಕಾರ್‌ನಂತೆ ಮರುವಿನ್ಯಾಸಗೊಳಿಸಿದ್ದಾರೆ. 

ಸಂಪೂರ್ಣ ಸುದ್ದಿ ಓದಿ

ಶಿವಮೊಗ್ಗ | ಎನ್‌ಕೌಂಟರ್‌ ನಡೆದಿಲ್ಲ; ಸುಳ್ಳು ಸುದ್ದಿ ಹರಡಿದರೆ FIR- ಎಸ್‌ಪಿ

‘ರಾಗಿಗುಡ್ಡದಲ್ಲಿ ಭಾನುವಾರ ರಾತ್ರಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಸ್ಲಿಂ ಯುವಕ ಸಾವಿಗೀಡಾಗಿದ್ದಾನೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದು ಸುಳ್ಳು‘ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.

ಸಂಪೂರ್ಣ ಸುದ್ದಿ ಓದಿ

ಲಿಂಗಾಯತ ಅಧಿಕಾರಿಗಳನ್ನು ಸರ್ಕಾರ ಕಡೆಗಣಿಸಿಲ್ಲ: ಸಚಿವ ಮಹದೇವಪ್ಪ

ಲಿಂಗಾಯತ ಸಮುದಾಯದ ಅಧಿಕಾರಿಗಳೂ ಸೇರಿದಂತೆ ಯಾರನ್ನೂ ಸರ್ಕಾರ ಮೂಲೆಗುಂಪು ಮಾಡಿಲ್ಲ. ಆ ರೀತಿ ಮಾಡಲೂ ಆಗದು ಎಂದು ಸಮಾಜ ಕಲ್ಯಾಣ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಸ್ಪಷ್ಟನೆ ನೀಡಿದರು.

ಸಂಪೂರ್ಣ ಸುದ್ದಿ ಓದಿ

ಅಮೆರಿಕ | 19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ ಪ್ರತಿಮೆ ಅನಾವರಣ ಅ.14ಕ್ಕೆ

19 ಅಡಿ ಎತ್ತರದ ಡಾ. ಬಿ.ಆರ್‌ ಅಂಬೇಡ್ಕರ್‌ರವರ ಸಮಾನತೆಯ ಪ್ರತಿಮೆಯು ( Statue of Equality) ಇದೇ ಅಕ್ಟೋಬರ್‌ 14ರಂದು ಅಮೆರಿಕದ ಮೇರಿಲ್ಯಾಂಡ್‌ನಲ್ಲಿ ಅನಾವರಣಗೊಳ್ಳಲಿದೆ. 19 ಅಡಿ ಎತ್ತರದ ಈ ಪ್ರತಿಮೆಯು ವಿದೇಶಗಳಲ್ಲಿ ಸ್ಥಾಪಿಸಲಾಗಿರುವ ಅಂಬೇಡ್ಕರ್‌ ಅವರ ಅತಿ ದೊಡ್ಡ ಪ್ರತಿಮೆಯಾಗಿದೆ.

ಸಂಪೂರ್ಣ ಸುದ್ದಿ ಓದಿ

ಶಿವಮೊಗ್ಗ ಕೋಮು ಗಲಭೆಗೆ ಸಿದ್ದರಾಮಯ್ಯ, ಪರಮೇಶ್ವರ ಕುಮ್ಮಕ್ಕು: ಶೋಭಾ ಕರಂದ್ಲಾಜೆ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಸಚಿವ ಜಿ.ಪರಮೇಶ್ವರ ಅವರು ಕುಮ್ಮಕ್ಕು ನೀಡಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಮಂಗಳವಾರ ಆರೋಪಿಸಿದರು.

ಸಂಪೂರ್ಣ ಸುದ್ದಿ ಓದಿ

ನಮ್ಮ ಮೆಟ್ರೊ ಹಸಿರು ಮಾರ್ಗ: ಹಳಿ ತಪ್ಪಿದ್ದ ಆರ್‌ಆರ್‌ವಿ ತೆರವು ಯಶಸ್ವಿ

‘ನಮ್ಮ ಮೆಟ್ರೊ’ದ ಹಸಿರು ಮಾರ್ಗದಲ್ಲಿ ಹಳಿತಪ್ಪಿದ್ದ ರಸ್ತೆ ರೈಲು ವಾಹನ (ಆರ್‌ಆರ್‌ವಿ)ವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ತೆರವು ಮಾಡಲಾಯಿತು.

ಸಂಪೂರ್ಣ ಸುದ್ದಿ ಓದಿ

Asian Games | kabaddi: ಭಾರತ ಪುರುಷ-ಮಹಿಳಾ ತಂಡಗಳ ಮೇಲುಗೈ

ಏಷ್ಯನ್ ಗೇಮ್ಸ್ 2023 ಕ್ರೀಡಾಕೂಟದಲ್ಲಿ ಕಬಡ್ಡಿ ವಿಭಾಗದಲ್ಲಿ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಮೇಲುಗೈ ಸಾಧಿಸಿವೆ. ದಾಖಲೆಯ ಏಳು ಬಾರಿ ಚಾಂಪಿಯನ್ ಭಾರತದ ಪುರುಷ ತಂಡವು, 'ಎ' ಗುಂಪಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 55-18ರ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.


ಸಂಪೂರ್ಣ ಸುದ್ದಿ ಓದಿ

Asian Games | ಯಶಸ್ವಿ ಜೈಸ್ವಾಲ್ ಶತಕ; ನೇಪಾಳ ಎದುರು ಗೆದ್ದ ಭಾರತ ಸೆಮಿಫೈನಲ್‌ಗೆ

ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಸಿಡಿಸಿದ ಅಮೋಘ ಶತಕದ ಬಲದಿಂದ ಭಾರತ ತಂಡವು ಏಷ್ಯನ್ ಕ್ರೀಡಾಕೂಟದ ಟಿ20 ಕ್ರಿಕೆಟ್‌ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದೆ.

ಸಂಪೂರ್ಣ ಸುದ್ದಿ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.