ADVERTISEMENT

ಬಿಜೆಪಿ–ಶಿವಸೇನೆ ಮುಂದೆ ಮಂಕಾದ ಪ್ರಕಾಶ್‌ ಅಂಬೇಡ್ಕರ್‌, ರಾಜ್‌ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2019, 6:33 IST
Last Updated 24 ಅಕ್ಟೋಬರ್ 2019, 6:33 IST
   

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆಗೆಲುವಿನ ನಾಗಾಲೋಟ ಮುಂದುವರೆಸಿದ್ದು ಅಂಬೇಡ್ಕರ್‌ ಮೊಮ್ಮಗ ಪ್ರಕಾಶ್‌ ಅಂಬೇಡ್ಕರ್‌ ಸ್ಥಾಪಿತ ವಂಚಿತ ಬಹುಜನ ಅಗಾಡಿ(ವಿಬಿಎ) ಹಾಗೂ ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್‌ಎಸ್‌) ಪಕ್ಷಗಳು ಕೇಸರಿ ಪಡೆ ಮುಂದೆ ಮಂಕಾಗಿವೆ.

ಪ್ರಕಾಶ್‌ ಅಂಬೇಡ್ಕರ್ ನೇತೃತ್ವದ ವಿಬಿಎ ದಲಿತ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿಯನ್ನು ಹಣಿಯಲು ಹೋರಾಟ ನಡೆಸಿತ್ತು. ಈ ಹಿನ್ನೆಲೆಯಲ್ಲಿ ವಿಬಿಎ 235 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಆದರೆ ಬಿಜೆಪಿಯ ಭದ್ರಕೋಟೆಯನ್ನು ಬೇದಿಸುವಲ್ಲಿ ವಿಫಲವಾಗಿರುವ ವಿಬಿಎ ಆರಂಭಿಕ ಟ್ರೆಂಡಿಂಗ್‌ನಲ್ಲಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡುಬಾರೀ ಹಿನ್ನಡೆ ಅನುಭವಿಸಿದೆ.

ವಾಣಿಜ್ಯ ನಗರಿ ಮುಂಬೈ, ಠಾಣೆ ಮೇಲೆ ಕಣ್ಣಿಟ್ಟು ಶಿವಸೇನೆ ಮತಗಳನ್ನು ಕಸಿಯಲು ತಂತ್ರ ಹೂಡಿದ ರಾಜ್‌ ಠಾಕ್ರೆ ಕೇವಲ 1 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ. ರಾಜ್‌ ಠಾಕ್ರೆ ನೇತೃತ್ವದ ಎಂಎನ್‌ಎಸ್‌ ಪಕ್ಷ 101 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿತ್ತು. ಮರಾಠಿಗರ ಸ್ವಾಭಿಮಾನ ಅಭಿಯಾನದಲ್ಲಿ ತೊಡಗಿಕೊಂಡು ಮುಂಬೈನಲ್ಲಿ ವಲಸಿಗರ ವಿರುದ್ಧ ಕಿಡಿಕಾರುತ್ತಿದ್ದ ರಾಜ್‌ ಠಾಕ್ರೆಗೆ ಸ್ವತಹ ಮರಾಠಿಗರೇ ಕೈಹಿಡಿದಿಲ್ಲ!

ADVERTISEMENT

ಕೇಸರಿ ಮೈತ್ರಿಕೂಟವನ್ನು ಕಟ್ಟಿಹಾಕುವಲ್ಲಿ ಶರಾದ್ ಪವಾರ್‌ ನೇತೃತ್ವದ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಯಶಸ್ವಿಯಾಗಿಲ್ಲ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ ಕೂಡ ಎನ್‌ಸಿಪಿಗಿಂತ ಹಿಂದೆ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.