ADVERTISEMENT

ತುಟ್ಟಿಭತ್ಯೆ ಶೇ.5 ಏರಿಕೆ: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 9:37 IST
Last Updated 9 ಅಕ್ಟೋಬರ್ 2019, 9:37 IST
ಪ್ರಕಾಶ್ ಜಾವಡೇಕರ್
ಪ್ರಕಾಶ್ ಜಾವಡೇಕರ್   

ನವದೆಹಲಿ: ಕೇಂದ್ರ ಸಚಿವ ಸಂಪುಟ ಬುಧವಾರ ನವದೆಹಲಿಯಲ್ಲಿ ಸಭೆ ಸೇರಿದೆ. ಸಭೆಯ ನಂತರ ಶಾಸ್ತ್ರಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್, ದೀಪಾವಳಿ ಉಡುಗೊರೆಯಾಗಿ ಕೇಂದ್ರ ಸರ್ಕಾರಿನೌಕರರತುಟ್ಟಿಭತ್ಯೆ ಶೇ.5ರಷ್ಟು ಏರಿಕೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದಿದ್ದಾರೆ.

ಅದೇ ವೇಳೆ ಪಿಂಚಣಿದಾರರಿಗೂ ತುಟ್ಟಿ ಪರಿಹಾರ (ಡಿಆರ್‌) ಶೇ.5ಏರಿಕೆ ಮಾಡಲಾಗಿದೆ. 2019 ಜುಲೈ ತಿಂಗಳಿನಿಂದಲೇ ಇದು ಅನ್ವಯವಾಗಲಿದೆ.

7ನೇ ವೇತನ ಆಯೋಗದ ಶಿಫಾರಸು ಮೇರೆಗೆ ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಿದೆ.

ADVERTISEMENT

48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62 ಲಕ್ಷ ಪಿಂಚಣಿದಾರರು ಇದರ ಫಲಾನುಭವಿಗಳಾಗಲಿದ್ದಾರೆ ಎಂದು ಜಾವಡೇಕರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯ ಮುಖ್ಯಾಂಶಗಳು
ಜಮ್ಮು ಕಾಶ್ಮೀರದಿಂದ ದೂರ ಹೋಗಿದ್ದು ಆಮೇಲೆ ಅಲ್ಲಿಗೆ ವಾಪಸ್ ಬಂದಿರುವ 5300 ಕುಟುಂಬಗಳಲ್ಲಿ ಪ್ರತಿ ಕುಟುಂಬಕ್ಕೆ 5.5 ಲಕ್ಷ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದು ಐತಿಹಾಸಿಕ ತಪ್ಪೊಂದನ್ನು ಸರಿ ಮಾಡುವ ಪ್ರಕ್ರಿಯೆ ಎಂದು ಜಾವಡೇಕರ್ ಹೇಳಿದ್ದಾರೆ,

ಆಗಸ್ಟ್ 1, 2019ರ ನಂತರ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಯಾಗಬೇಕಿದ್ದರೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ. ಹೀಗೆ ಆಧಾರ್ಲಿಂಕ್ ಮಾಡಲಿರುವ ದಿನಾಂಕವನ್ನು 2019 ನವೆಂಬರ್ 30ರ ವರಗೆ ವಿಸ್ತರಿಸಲಾಗಿದೆ.

ರಾಬಿ ಬೆಳೆ ಬಿತ್ತನೆ ಆರಂಭವಾಗುತ್ತಿರುವುದರಿಂದ ದಿನಾಂಕ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ ಜಾವಡೇಕರ್. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ 7 ಕೋಟಿ ರೈತರು ಫಲಾನುಭವಿಗಳಾಗಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ರೈತನಿಗೂ ಮೂರು ಕಂತುಗಳಲ್ಲಿ ₹6,000 ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.