ADVERTISEMENT

ಬಿಜೆಪಿಯ ಪ್ರಮೋದ್‌ ಸಾವಂತ್ ಗೋವಾ ಮುಖ್ಯಮಂತ್ರಿ; ರಾತ್ರಿಯೇ ಪ್ರಮಾಣ ವಚನ ಸ್ವೀಕಾರ

ಏಜೆನ್ಸೀಸ್
Published 18 ಮಾರ್ಚ್ 2019, 14:23 IST
Last Updated 18 ಮಾರ್ಚ್ 2019, 14:23 IST
   

ಪಣಜಿ: ಗೋವಾ ವಿಧಾನಸಭಾ ಸ್ಪೀಕರ್ ಆಗಿರುವ ಪ್ರಮೋದ್ ಸಾವಂತ್(45) ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ಭಾನುವಾರ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪರ‍್ರೀಕರ್ ಅವರ ಅಂತ್ಯಕ್ರಿಯೆ ಸೋಮವಾರ ನೆರವೇರಿತು. ಅದರ ಬೆನ್ನಲೇ ಮುಖ್ಯಮಂತ್ರಿಸ್ಥಾನಕ್ಕೆ ನೂತನ ಅಭ್ಯರ್ಥಿ ಆಯ್ಕೆನಡೆದಿದೆ. ಪ್ರಮೋದ್‌ ಸಾವಂತ್‌ ಮುಖ್ಯಮಂತ್ರಿ ಹಾಗೂ ವಿಜಯ್‌ ಸರ್ದೇಸಾಯಿ ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದು ರಾತ್ರಿಯೇ ಪ್ರಮಾಣ ವಚನ ಸ್ವೀಕಾರಿ ನಡೆಯುವ ಸಾಧ್ಯತೆ ಇರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ADVERTISEMENT

ಕೇಂದ್ರ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ನಿತಿನ್ ಗಡ್ಕರಿ ಮತ್ತು ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್ ಹಾಗೂಬಿಜೆಪಿ ಗೋವಾ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಮಧ್ಯಾಹ್ನ ಸಭೆ ನಡೆಸಿದ್ದರು. ಇದಕ್ಕಿಂತ ಮುನ್ನ ಗಡ್ಕರಿ ಅವರು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ(ಎಂಜಿಪಿ) ಶಾಸಕರನ್ನು ಭೇಟಿ ಮಾಡಿದ್ದರು.

40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 12 ಶಾಸಕರನ್ನು ಹೊಂದಿದ್ದು, ಗೋವಾ ಫಾರ್ವರ್ಡ್‌ ಪಾರ್ಟಿ ಮತ್ತುಎಂಜಿಪಿಯಿಂದ ತಲಾ ಮೂರು ಶಾಸಕರು ಹಾಗೂ ಮೂವರು ಪಕ್ಷೇತರರ ಬಲದಿಂದ 21 ಸದಸ್ಯರ ಬೆಂಬಲದೊಂದಿಗೆಸರಳ ಬಹುಮತ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.