ADVERTISEMENT

ಸಾವಂತ್ ಪ್ರಮಾಣ ಇಂದು: ಪ್ರಧಾನಿ ಮೋದಿ, ಸಚಿವ ರಾಜನಾಥ್ ಸಿಂಗ್ ಭಾಗಿ

ಪ್ರಧಾನಿ ಮೋದಿ, ಸಚಿವ ರಾಜನಾಥ್ ಸಿಂಗ್ ಭಾಗಿ

ಪಿಟಿಐ
Published 27 ಮಾರ್ಚ್ 2022, 19:30 IST
Last Updated 27 ಮಾರ್ಚ್ 2022, 19:30 IST
ಪ್ರಮೋದ್ ಸಾವಂತ್
ಪ್ರಮೋದ್ ಸಾವಂತ್   

ಪಣಜಿ: ಪ್ರಮೋದ್ ಸಾವಂತ್ ಅವರು ಎರಡನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇಲ್ಲಿನ ಶ್ಯಾಮ್‌ಪ್ರಸಾದ್ ಮುಖರ್ಜಿ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಿಗದಿಯಾಗಿದೆ. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಜಭವನದ ಹೊರಗಡೆ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ
ಕಾರ್ಯಕ್ರಮ ನಡೆಯುತ್ತಿರುವುದು ಇದು ಎರಡನೇ ಬಾರಿ. 2012ರಲ್ಲಿ ಮನೋಹರ್ ಪರಿಕ್ಕರ್‌ ಅವರು ಕಂಪಾಲ್‌ನ ಪರೇಡ್ ಮೈದಾನದಲ್ಲಿ ಅಧಿಕಾರ ಸ್ವೀಕರಿಸಿದ್ದರು.

ಸಚಿವರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯನ್ನು ಬಿಜೆಪಿ ಗೋಪ್ಯವಾಗಿಟ್ಟಿದೆ. ಎಷ್ಟು ಮಂದಿ ಸಚಿವರಾಗಲಿದ್ದಾರೆ ಎಂಬ ಬಗ್ಗೆ ಸೋಮವಾರದವರೆಗೆ ಕಾದುನೋಡಿ ಎಂದು ಸಾವಂತ್ ಅವರು ಭಾನುವಾರ ಹೇಳಿದ್ದಾರೆ. ಗೋವಾ ಸಂಪುಟದಲ್ಲಿ ಮುಖ್ಯಮಂತ್ರಿಯನ್ನು ಬಿಟ್ಟು 11 ಮಂದಿ ಸಚಿವರಾಗಲು ಅವಕಾಶವಿದೆ.

ADVERTISEMENT

2017ರಲ್ಲಿ ಪರಿಕ್ಕರ್‌ ಅವರ ಸರ್ಕಾರದಲ್ಲಿ ಸಾವಂತ್ ಅವರು ಸ್ಪೀಕರ್ ಆಗಿ ಕೆಲಸ ಮಾಡಿದ್ದರು. ಪರಿಕ್ಕರ್‌ ಅವರ ನಿಧನದ ಬಳಿಕ ಮುಖ್ಯಮಂತ್ರಿಯಾಗಿ
ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.